ಮಡಿಕೇರಿ, ಮಾ. 15: ಬಾಳೆಲೆಯಲ್ಲಿ ನಿನ್ನೆ ರಾತ್ರಿ ಕೊಣನೂರು ಮೂಲದ ಕಾರ್ಮಿಕ ರವಿ ಎಂಬಾತ ತಾನು ಪಾನಿಪೂರಿ ತಿನ್ನುತ್ತಿದ್ದಾಗ ಮತ್ತೊರ್ವ ವೃದ್ಧ ಚಿಕ್ಕಯ್ಯ (70) ಅದನ್ನೇ ಸ್ವಲ್ಪ ತೆಗೆದು ತಿಂದ ಬಗ್ಗೆ ಕ್ರೋದಗೊಂಡು ಕೊಲೆಗೈದ ಕೃತ್ಯ ಸಂಭವಿಸಿದೆ.ಹೆಚ್.ಡಿ. ಕೋಟೆ ತಾಲೂಕು ಸರಗೂರುವಿನ ಮೂಲದ ಕಾರ್ಮಿಕ ಚಿಕ್ಕಯ್ಯ ಮೇಲೆ ರವಿ ಹಲ್ಲೆ ನಡೆಸಿದಾಗ, ವೃದ್ಧ ಕುಸಿದು ಬಿದ್ದಿದ್ದು, ತೀವ್ರ ಗಾಯ ಗೊಂಡು ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿ ರವಿ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದಾರೆ.