ಮಡಿಕೇರಿ, ಮಾ. 15: ಸಾಲಭಾದೆ ಹಾಗೂ ಅನಾರೋಗ್ಯದಿಂದ ತಾಕೇರಿ ನಿವಾಸಿಗಳಾದ ಎಸ್. ಸುಬ್ಬಯ್ಯ ಮತ್ತು ಶಾಂತಕುಮಾರಿ ದಂಪತಿ ಇಂದು ಬೆಳಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಈ ದಂಪತಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆತಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಾಂತಕುಮಾರಿ (55) ಕೊನೆಯುಸಿರೆಳೆದಿದ್ದಾರೆ. ಪತಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ತಾಕೇರಿಯಲ್ಲಿ ಮೃತೆ ಶಾಂತಕುಮಾರಿ ಅಂತ್ಯಸಂಸ್ಕಾರ ನಡೆದಿದ್ದು, ಸುಬ್ಬಯ್ಯ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಪೊಲೀಸ್ ಮೊಕದ್ದಮೆ ದಾಖಲಾಗಿದೆ.