ಭಾಗಮಂಡಲ, ಮಾ. 14: ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿ ಗಳಿಗೆ ಚಾಲನೆ ನೀಡಲಾಯಿತು. ಉಡೋತ್ ಮೊಟ್ಟೆಯ ಜ್ಯೋತಿ ಕಾಲೋನಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ರೂ. 5 ಲಕ್ಷ , ಮುಂದುವರಿದ ರಸ್ತೆಗೆ ರೂ. 4 ಲಕ್ಷ, ಚಾತುರನ ಮತ್ತು ಕೋಳುಮಾಡ ಕುಟುಂಬಸ್ಥರ ಸ್ಥಳಕ್ಕಾಗಿ ಹಾದುಹೋಗುವ ಗ್ರಾಮದ ರಸ್ತೆಯ ಕಾಮಗಾರಿಗೆ ರೂ. 6 ಲಕ್ಷ ಹಾಗೂ ಬೇಂಗೂರು ಗ್ರಾಮದ ಹರಿಜನ ಕಾಲೋನಿ ಕಾಂಕ್ರೀಟ್ ರಸ್ತೆಗೆ ರೂ. 5 ಲಕ್ಷ, ಅನುದಾನ ಲಭಿಸಿದ್ದು, ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯರಾದ ಕುಮುದ ರಶ್ಮಿ, ಗಪ್ಪು ಗಣಪತಿ, ಯುವ ಮೋರ್ಚಾದ ಕಡ್ಲೇರ ಕೀರ್ತನ್, ಸೂರಿ ಕಕೇರಿ, ಬೆಪ್ಪುರನ ಮೇದಪ್ಪ, ಬೇಂಗೂರು ಗ್ರಾ.ಪಂ. ಅಧ್ಯಕ್ಷ ಅಶೋಕ್, ವಿಎಸ್ ಎಸ್‍ಎನ್ ನಿರ್ದೇಶಕ ಸುಮನ್ ಮತ್ತಿತರರು ಪಾಲ್ಗೊಂಡಿದ್ದರು.