ಸುಂಟಿಕೊಪ್ಪ, ಮಾ. 14: ಸುಂಟಿಕೊಪ್ಪ ಹಿಂದೂ ಯುವಕ ಸಂಘದ ದ್ವಿತೀಯ ವಾರ್ಷಿಕೋತ್ಸವವ ಅಂಗವಾಗಿ ಶಿವಾಜಿಕಪ್ ಸೂಪರ್ 11 ಕ್ರಿಕೆಟ್ ಪಂದ್ಯಾಟ ಇಲ್ಲಿನ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ತಾ. 17 ಮತ್ತು 18 ರಂದು ನಡೆಯಲಿದೆ.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ನಗದು ಬಹುಮಾನ ರೂ. 22,222 ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 12,222 ಹಾಗೂ ಟ್ರೋಫಿ ಅಲ್ಲದೆ ಅತ್ಯುತ್ತಮ ಬ್ಯಾಟ್ಸ್ಮೆನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಕ್ಯಾಚ್, ಸರಣಿ ಪರುಷೋತ್ತಮ ಪ್ರಶಸ್ತಿ ನೀಡಲಾಗುವದು.
ಮೈದಾನ ಶುಲ್ಕ ರೂ. 1,600 ಆಗಿದ್ದು, ಪಂದ್ಯಾಟ 5 ಓವರ್ಗಳಿಗೆ ಸೀಮಿತವಾಗಿದೆ. ವಿವರಗಳಿಗೆ ವಸಂತ ಮೊಬೈಲ್ 9481883354, ರವಿ 9483825823 ಇವರನ್ನು ಸಂಪರ್ಕಿಸುವಂತೆ ಕ್ರೀಡಾ ಆಯೋಜಕ ಪದಾಧಿಕಾರಿಗಳು ತಿಳಿಸಿದ್ದಾರೆ.