ಕುಶಾಲನಗರ, ಮಾ. 14: ಕುಶಾಲನಗರ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ಸಹಕಾರ ಸಂಘದ ವಿಶೇಷ ಸಾಮಾನ್ಯ ಸಭೆ ಕುಶಾಲನಗರದ ಎಪಿಸಿಎಂಸ್ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯ ವ್ಯಾಪ್ತಿಯನ್ನು ಸೋಮವಾರಪೇಟೆ ಹಾಗೂ ನೆರೆಯ ಪಿರಿಯಾಪಟ್ಟಣ ತಾಲೂಕುಗಳಿಗೆ ಅನ್ವಯವಾಗುವಂತೆ ವಿಸ್ತರಿಸಲು ಸಭೆ ತೀರ್ಮಾನಿಸಿತು.

ಉಪವಿಧಿಗಳ ನಿಯಮಗಳ ತಿದ್ದುಪಡಿ ಮತ್ತಿತರ ಚರ್ಚೆಗಳು ನಡೆದವು. ಹಿಂದಿನ ಅಧ್ಯಕ್ಷರು ಹಾಗೂ ನಿರ್ದೇಶಕ ಟಿ.ಆರ್. ಶರವಣಕುಮಾರ್ ಪ್ರಾಸ್ತಾವಿಕ ನುಡಿಗಳಾಡಿದರು.

ಈ ಸಂದರ್ಭ ಉಪಾಧ್ಯಕ್ಷ ಎಂ.ಎಂ. ಶಾಹಿರ್, ನಿರ್ದೇಶಕರುಗಳು ಇದ್ದರು.