ಸುಂಟಿಕೊಪ್ಪ, ಮಾ. 9: ಕೊಡಗಿನ ಕುಶಾಲನಗರದವರಗೆ ರೈಲ್ವೆ ಸಂಪರ್ಕ ಲಭಿಸಿದರೆ ಕೃಷಿಕರಿಗೆ ಅನುಕೂಲಕರವಾಗಲಿದೆ ಎಂದು ಸೋಮವಾರಪೇಟೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ತಿಳಿಸಿದ್ದಾರೆ.

ಕಾಫಿ, ಗೊಬ್ಬರ ಸಾಗಾಣೆಗೊಳಿಸಲು ರೈಲಿನ ಮೂಲಕ ಸಾಧ್ಯವಾಗಲಿದೆ. ಮೈಸೂರಿನಿಂದ ಕೊಡಗಿನ ಕುಗ್ರಾಮಗಳಿಗೆ ಗ್ರಾನೈಟ್ ಇತ್ಯಾದಿ ಸಾಮಗ್ರಿಗಳನ್ನು ವಾಹನದಲ್ಲಿ ಬಾಡಿಗೆಗೆ ತರಲು ದುಬಾರಿ ವೆಚ್ಚ ತಗಲುತ್ತದೆ. ಕುಶಾಲನಗರ ತನಕ ರೈಲ್ವೆ ಸಂಪರ್ಕದಿಂದ ಶ್ರೀಸಾಮಾನ್ಯನಿಗೆ ಪ್ರಯೋಜನವಾಗಲಿದ್ದು, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್, ಸಂಸದ ಪ್ರತಾಪ್ ಸಿಂಹ ಅವರು ಕೊಡಗಿಗೆ ರೈಲ್ವೆ ಸಂಪರ್ಕ ತರಲು ಉತ್ಸುಕರಾಗಿದ್ದಾರೆ. ಕೆಲ ಪರಿಸರವಾದಿಗಳು ಮಾತ್ರ ಕೊಡಗಿನ ಅಭಿವೃದ್ಧಿಗೆ ರೈಲು ಸಂಪರ್ಕಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜನತೆಗೆ ರೈಲು ಬೇಕು ಎಂಬ ಆಶಯ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.