ಸುಂಟಿಕೊಪ್ಪ,ಮಾ.9: ಬೇಟೆಗಾರರ ಗುಂಡಿಗೆ 9 ವರ್ಷದ ಗಂಡು ಕಾಡುಕೋಣವೊಂದು ಸಿಲುಕಿ ಪ್ರಾಣ ತೆತ್ತಿರುವ ಘಟನೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಂಭವಿಸಿದೆ.ಆಂಜನಗೇರಿ ಬೆಟ್ಟಗೇರಿ ವ್ಯಾಪ್ತಿಯ ಮಟ್ಟತ್‍ಕಾಡು ಬಳಿಯಲ್ಲಿ ಆಹಾರ ಅರಸಿ ಬಂದಿದ್ದ ಕಾಡುಕೋಣಕ್ಕೆ ತಾ.8 ರಂದು ಸಂಜೆ 4.30 ರ ಸಂದರ್ಭದಲ್ಲಿ ಬೇಟೆಗಾರರು ಸಿಡಿಸಿದ ಗುಂಡೇಟಿನಿಂದ ತೀವ್ರ ಗಾಯಗೊಂಡು ಮಹೇಂದ್ರ ಎಂಬವರ ತೋಟದ ರಸ್ತೆ ಬದಿಯಲ್ಲಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ತಿಳಿದು ಬಂದ ಹಿನ್ನೆಲೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎ.ಸಿ.ಎಫ್. ಚಿಣ್ಣಪ್ಪ, ವಲಂiÀi ಅರಣ್ಯಾಧಿಕಾರಿ ಅರುಣ್, ಉಪ ವಲಂiÀi ಅರಣ್ಯಾಧಿಕಾರಿ ಅನಿಲ್ ಡಿಸೋಜ, ಅರಣ್ಯ ರಕ್ಷಕರಾದ ಮಂಜೇಗೌಡ, ಪೂಣಚ್ಚ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು. ವೈಡ್‍ಲೈಫ್ ವೈದ್ಯಾಧಿಕಾರಿ ಮುಜಿಬ್ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳ ಮಹಜರು ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದೆಂದು ಅಧಿಕಾರಿಗಳು ತಿಳಿಸಿದರು.

ಇತ್ತೀಚೆಗೆ ಮಡಿಕೇರಿ ಅರಣ್ಯ ಭವನದ ಬಳಿ ಕಡವೆಯೊಂದನ್ನು ಇದೇ ರೀತಿ ಹತ್ಯೆಗೈದ ಪ್ರಕರಣವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.