ಗೋಣಿಕೊಪ್ಪ, ಮಾ. 9: ಕುಂದಾ ಸಮೀಪದ 5 ಊರುಗಳಿಗೆ ಸೇರಿದ ಬೊಟ್ಟಿಯತ್‍ನಾಡು ಈಶ್ವರ ದೇವಸ್ಥಾನಕ್ಕೆ ಶತ ಶತಮಾನಗಳ ಇತಿಹಾಸವಿದ್ದು ಕುಂದಾಬೆಟ್ಟದ ತಪ್ಪಲಿನಲ್ಲಿರುವ ಈಶ್ವರ ದೇವಸ್ಥಾನದ ವಾರ್ಷಿಕ ಉತ್ಸವ ತಾ. 11 ರಂದು ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಸಂಜೆ ದೇವರ ಮೂರ್ತಿಯ ಜಳಕ ನಡೆಯಲಿದೆ. ಈಗಾಗಲೇ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತಿದ್ದು, ಗಣಪತಿ ಪೂಜೆ, ವಸಂತ ಪೂಜೆ, ರಂಗ ಪೂಜೆ, ರುದ್ರಾಭಿಷೇಕ, ಅಲಂಕಾರ ಪೂಜೆಗಳು ದಂಪತಿ ಪೂಜೆ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ 98453608910 ಅಥವಾ 9986639185 ಸಂಪರ್ಕಿಸಬಹುದಾಗಿದೆ.