ವೀರಾಜಪೇಟೆ, ಮಾ. 9: ಐಮಂಗಲ ಗ್ರಾಮದ ವರ ಸಿದ್ದಿ ವಿನಾಯಕ ದೇವಾಲಯದ ಹನ್ನೆರಡನೇ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಶುದ್ಧ ಕಳಶ, ಅಭಿಷೇಕಗಳು ಜರುಗಿದವು. ಅಪರಾಹ್ನ 12.30 ಗಂಟೆಗೆ ದೇವಾಲಯದಲ್ಲಿ ಮಹಾ ಪೂಜಾ ಸೇವೆ ಜರುಗಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.