ಕೂಡಿಗೆ, ಮಾ. 9: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಂಸ್ಟೇ ಮಾಲೀಕರೊಂದಿಗೆ ಪೊಲೀಸ್ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ಗೌಡ ಮಾತನಾಡಿ, ಹೋಂಸ್ಟೇಗೆ ಬರುವ ಪ್ರವಾಸಿಗರ ದಾಖಲಾತಿ ಮತ್ತು ಕಾನೂನಿನ ನಿಯಮಾನುಸಾರ ಹೋಂಸ್ಟೇಗಳನ್ನು ನೀಡುವದು ಮತ್ತು ಹೋಂಸ್ಟೇನ ಮಾಲೀಕರು ಪರವಾನಿಗೆ ದಾಖಲಾತಿಗಳನ್ನು ಕಾನೂನಾತ್ಮಕವಾಗಿ ಇಡುವದು ಸೇರಿದಂತೆ ಯಾವದೇ ರೀತಿಯ ಸಮಸ್ಯೆಗಳು ಉದ್ಬವವಾಗದ ರೀತಿಯಲ್ಲಿ ಹೋಂಸ್ಟೇ ನಡೆಸಿಕೊಂಡು ಹೋಗುವದರ ಬಗ್ಗೆ ತಿಳಿಸಿದರು. ಈ ಸಂದರ್ಭ ಗ್ರಾಮಾಂತರ ಠಾಣಾ ವ್ಯಾಪ್ತಿಗೊಳಪಡುವ ಹೋಂಸ್ಟೇಗಳ ಮಾಲೀಕರು ಸಭೆಯಲ್ಲಿದ್ದರು.