ಮಡಿಕೇರಿ, ಮಾ. 8: ಚೆಟ್ಟಿಮಾನಿಯಲ್ಲಿ ತಾ. 27 ರಿಂದ ಏ. 7 ರವರೆಗೆ ಗೌಡ ಕುಟುಂಬಗಳ ನಡುವೆ ನಡೆಯಲಿರುವ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ತಂಡಗಳ ಹೆಸರನ್ನು ನೋಂದಾಯಿಸಲು ತಾ. 12ರವರೆಗೆ ಮಾತ್ರ ಕಾಲವಕಾಶವಿರುತ್ತದೆ ಎಂದು ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೆದಂಬಾಡಿ ಆರ್. ಆನಂದ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆದಂಬಾಡಿ ಕಪ್ ಕ್ರಿಕೆಟ್ ಉತ್ಸವ ಪ್ರಸಕ್ತ ವರ್ಷ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದ್ದು, ಕ್ರಿಕೆಟ್ ಹಬ್ಬವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ.

ಕೆದಂಬಾಡಿ ಕುಟುಂಬದ ಪಟ್ಟೆದಾರ ಕೆದಂಬಾಡಿ ಆನಂದ್ ಅವರ ನೇತೃತ್ವದಲ್ಲಿ ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್ ಇವರುಗಳ ಮಾರ್ಗದರ್ಶನದಲ್ಲಿ ಕ್ರಿಕೆಟ್ ಹಬ್ಬದ ಉಸ್ತುವಾರಿ ಸಂಚಾಲಕರಾಗಿ ಕೆದಂಬಾಡಿ ಸುರೇಶ್ ಕರುಂಬಯ್ಯ, ಕೆದಂಬಾಡಿ ಕವಿಪ್ರಸಾದ್, ಪ್ರಧಾನ ಕಾರ್ಯದರ್ಶಿ ಕೆದಂಬಾಡಿ ನಂದಕುಮಾರ್, ಕಾರ್ಯದರ್ಶಿ ಕೆದಂಬಾಡಿ ಪೃಥ್ವಿರಾಜ್ ಇವರುಗಳು ಸಿದ್ಧತೆ ಕೈಗೊಂಡಿದ್ದಾರೆ ಕೆ.ಬಿ. ಯತೀಶ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಪಂದ್ಯಾವಳಿಗೆ ತಂಡಗಳ ಹೆಸರು ನೋಂದಾಯಿಸಲು ಹೆಚ್ಚಿನ ವಿವರಗಳಿಗೆ 9480256438 ಅಥವಾ 9448422289, 9449143169 ದೂರವಾಣಿಯನ್ನು ಸಂಪರ್ಕಿಸಬಹುದು.