ಮಡಿಕೇರಿ, ಮಾ.8 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವೈದ್ಯಕೀಯ ಘಟಕ, ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ, ಮಂಗಳೂರಿನ ಇಂಡಿಯಾ ಆಸ್ಪತ್ರೆ ಮತ್ತು ಹಿರಿಯ ವಕೀಲರಾದ ಎಚ್.ಎಸ್. ಚಂದ್ರಮೌಳಿ ಇವರ ಸಂಯುಕ್ತಾಶ್ರಯದಲ್ಲಿ ತಾ.11 ರಂದು ನಗರದ ರೋಟರಿ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಔಷಧ ವಿತರಣಾ ಶಿಬಿರ ನಡೆಯಲಿದೆ.
ಪತ್ರಿಕಾ ಹೇಳಿಕೆ ನೀಡಿರುವ ವೈದ್ಯರ ಘಟಕದ ಅಧ್ಯಕ್ಷ ಡಾ.ಸಿ.ಆರ್.ಉದಯಕುಮಾರ್ ತಾ.11 ರಂದು ಬೆಳಿಗ್ಗೆ 8.30 ರಿಂದ ಮಧ್ನಾಹ್ನ 2 ಗಂಟೆಯವರೆಗೆ ನಡೆಯಲಿದೆ. ಹೃದಯ ತಜ್ಞರು, ನರ ಶಸ್ತ್ರ ಚಿಕಿತ್ಸಕರು, ಮೂತ್ರಪಿಂಡ ತಜ್ಞರು, ಕೀಲು ಮತ್ತು ಮೂಳೆ ತಜ್ಞರು, ಶ್ವಾಸಕೋಶ ತಜ್ಞರು ಹಾಗೂ ಕರಳು ಮತ್ತು ಪಿತ್ತಜನಕಾಂಗ ಚಿಕಿತ್ಸಾ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮತ್ತು ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ.ಯೂಸಫ್ ಕುಂಬ್ಳೆ ಶಿಬಿರವನ್ನು ನಡೆಸಿಕೊಡಲಿದ್ದು, ಶಿಬಿರದಲ್ಲಿ ಇಸಿಜಿ, ಬ್ಲಡ್, ಶುಗರ್, ಬಿ.ಪಿ ಪರೀಕ್ಷೆಗಳು ಉಚಿತವಾಗಿ ನಡೆಯಲಿದೆ ಎಂದು ಡಾ.ಉದಯಕುಮಾರ್ ತಿಳಿಸಿದ್ದಾರೆ.
ಶಿಬಿರಕ್ಕೆ ಬರುವವರು ಮುಂಚಿತ ವಾಗಿ ಟೋಕನ್ ಪಡೆಯಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ 88844 32052, 94481 56563, 94491 56215 ಸಂಪರ್ಕಿಸಬಹುದಾಗಿದೆ.