ವೀರಾಜಪೇಟೆ, ಮಾ. 8: ವೀರಾಜಪೇಟೆಯ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಶಿಬಿರದಲ್ಲಿ 300 ಹಸುಗಳ ಆರೋಗ್ಯ ತಪಾಸಣೆ ಹಾಗೂ 30 ನಾಯಿಗಳಿಗೆ ರೋಗ ನಿರೋಧ ಲಸಿಕೆಯನ್ನು ಹಾಕಲಾಯಿತು.
ವೀರಾಜಪೇಟೆಯ ಬಳಿಯ ಕಿರುಮಕ್ಕಿಯಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್ ಹಾಗೂ ಇಲ್ಲಿನ ಪಶು ವೈದ್ಯಕೀಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಇಲಾಖೆಯ ವೈದ್ಯರಾದ ಡಾ. ತಿಮ್ಮಯ್ಯ ಹಸುಗಳ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಲಸಿಕೆಗಳನ್ನು ಹಾಕಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ, ಕಾರ್ಯದರ್ಶಿ ಬಲ್ಲಚಂಡ ಅಶ್ವಥ್ ಗಣಪತಿ, ಇತರ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.