ವೀರಾಜಪೇಟೆ, ಮಾ. 8: ಕುಟ್ಟ ವಿಭಾಗದಿಂದ ಕೇರಳಕ್ಕೆ ಅಕ್ರಮವಾಗಿ ಹಲಸಿನ ಮರಗಳ ದಿಮ್ಮಿಗಳನ್ನು ಸಾಗಿಸುತ್ತಿದ್ದುದನ್ನು ಇಲ್ಲಿನ ಪೆರುಂಬಾಡಿ ಚೆಕ್ ಪೋಸ್ಟ್ ಬಳಿ ಪರಿಶೀಲನೆ ನಡೆಸಿದ ನಗರ ಪೊಲೀಸರು (ಕೆ.ಎಲ್.58 ಎಫ್1595)ರ ಮಿನಿ ಲಾರಿ ಸಹಿತ ರೂ. 75000 ಮೌಲ್ಯದ ಹಲಸಿನ ಮರದ ದಿಮ್ಮಿಗಳನ್ನು ವಶ ಪಡಿಸಿಕೊಂಡು ಚಾಲಕ ಕೇರಳದ ಕಣ್ಣಾನೂರಿನ ಟಿಜೋ ಜೋಸೆಫ್ ಎಂಬಾತನನ್ನು ಬಂಧಿಸಿದ್ದಾರೆ.