ಸೋಮವಾರಪೇಟೆ, ಮಾ.8 : ಇಲ್ಲಿನ ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ವಯೋಸಹಜ ನಿವೃತ್ತಿ ಹೊಂದಿದ ಚಂದ್ರಶೇಖರ್ ಅವರಿಗೆ ತಾ.ಪಂ. ಆಡಳಿತದಿಂದ ಅಭಿನಂದಿಸಿ, ಬೀಳ್ಕೊಡಲಾಯಿತು. ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿದರು. ಇದೇ ಸಂದರ್ಭ ತಾಲೂಕು ಪಂಚಾಯಿತಿಯಿಂದ ಫಲತಾಂಬೂಲ ಸಹಿತ ಶಾಲು ಹೊದಿಸಿ ಸನ್ಮಾನಿಸಿದ ಸದಸ್ಯರುಗಳು, ಚಂದ್ರಶೇಖರ್ ಅವರಿಗೆ ಚಿನ್ನದ ಉಂಗುರವನ್ನು ನೀಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಚಂದ್ರಶೇಖರ್ ಅವರ ಪತ್ನಿ ಮಂಜುಳಾ, ಕಾರ್ಯ ನಿರ್ವಹಣಾಧಿಕಾರಿ ಚಿಟ್ಟಿಯಪ್ಪ, ತಾಲೂಕು ತಹಸೀಲ್ದಾರ್ ಮಹೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ.ನ ಸದಸ್ಯರುಗಳು, ಕಚೇರಿ ಸಿಬ್ಬಂದಿ ಗಳು, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.