ಮಡಿಕೇರಿ, ಮಾ. 8: ದುಬಾರೆ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ಸಾಹಸಿ ಜಲಕ್ರೀಡೆಯ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಒಡೆತನಕ್ಕೆ ನೀಡದೆ ಜಂಗಲ್ ಲಾಡ್ಜ್ ರೆಸಾರ್ಟ್ ನಿಗಮಕ್ಕೆ ವಹಿಸುವಂತೆ ಮಾಜಿ ಸಚಿವ ಯಂ. ಸಿ. ನಾಣಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಲಹೆ ಮಾಡಿದ್ದಾರೆ.ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದಾಗ ಅಧಿವೇಶನದಲ್ಲಿ ದುಬಾರೆ ರ್ಯಾಫ್ಟಿಂಗ್ ದಂಧೆ ಬಗ್ಗೆ ಗಮನ ಸೆಳೆದಿರುವ ಹಾಗೂ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರಿಗೆ ಅಂದಿನ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರುಗಳಿಗೆ ಪತ್ರದ ನಕಲನ್ನು ಕೂಡ ಲಗತ್ತಿಸಿದ್ದಾರೆ. ಪತ್ರದ ಸಾರಾಂಶ ಇಂತಿದೆ. ಜಿಲ್ಲಾಧಿಕಾರಿಗಳಾದ ತಾವು ದುಬಾರೆ ಅರಣ್ಯ (ಮೊದಲ ಪುಟದಿಂದ) ಪ್ರದೇಶದ ವಿವಿಧ ಭಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ರಿವರ್ ರ್ಯಾಫ್ಟಿಂಗ್ ದಂಧೆ, ಶೋಷಣೆ, ಜನರ ಪ್ರಾಣಹಾನಿ, ಶಾಂತಿ-ಸುವ್ಯವಸ್ಥೆ ಮತ್ತು ಕಾನೂನು ಭಂಗ ಮತ್ತು ಉಲ್ಲಂಘನೆಯಿಂದ ಆಗುತ್ತಿರುವ ಅಪಾಯಕಾರಿ ಪರಿಸ್ಥಿತಿಯನ್ನು ತಡೆಗಟ್ಟಲು ಸಿ.ಆರ್.ಪಿ.ಸಿ. ಕಲಂ 130 ರ ಅಡಿಯಲ್ಲಿ ಜಿಲ್ಲೆಯಾದ್ಯಂತ ರಿವರ್ ರ್ಯಾಫ್ಟಿಂಗ್ ಉದ್ದಿಮೆ ನಡೆಸುವದನ್ನು ಫೆಬ್ರವರಿ 22 ರಿಂದ ನಿಷೇಧಿಸಿರುವದು ಸಮಯೋಚಿತವಾದ ಮತ್ತು ಶ್ಲಾಘನೀಯವಾದಂತಹ ಒಂದು ಕ್ರಮ.

ಈ ಒಂದು ರಿವರ್‍ರ್ಯಾಪ್ಟಿಂಗ್ ದಂಧೆಯ ಬUಅÉ್ಗ ಬರೆದಿರುವ ಪತ್ರಗಳಲ್ಲಿ ತಾವು ಯಾವ ಅಪಾಯಕಾರಿ ಈ ಒಂದು ರ್ಯಾಫ್ಟಿಂಗ್ ದಂಧೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಿರುತ್ತೀರಿ; ಆ ಎಲ್ಲಾ ಆತಂಕಗಳನ್ನು ಮತ್ತು ಅಪಾಯಕಾರಿ ರ್ಯಾಫ್ಟಿಂಗ್ ದಂಧೆಯಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಕಾನೂನಿನ ಉಲ್ಲಂಘನೆಯನ್ನು ಸಂಪೂರ್ಣವಾಗಿ ಉಲ್ಲೇಖಿಸಿ ಈ ಒಂದುರ್ಯಾಫ್ಟಿಂಗ್ ದಂಧೆಯನ್ನು ಕೂಡಲೇ ನಿಯಂತ್ರಿಸಬೇಕೆಂದು ಮತ್ತು ಈ ಒಂದು ರ್ಯಾಫ್ಟಿಂಗ್‍ನ್ನು ನಡೆಸುವದಾದರೆ ಇದರ ಸಂಪೂರ್ಣ ಜವಾಬ್ದಾರಿಕೆ ಮತ್ತು ಹತೋಟಿಯನ್ನು ದುಬಾರೆಯಲ್ಲಿ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಜಂಗಲ್ ಲಾಡ್ಜ್ ಉದ್ಯಮಕ್ಕೆ ವಹಿಸಬೇಕೆಂದು ಕೋರಿದ್ದೆ. 2012 ರಲ್ಲಿ ಬರೆದ ಮೊದಲನೇ ಪತ್ರದಲ್ಲಿ ತಾವು ಆತಂಕ ಪಡಿಸಿರುವ ಎಲ್ಲಾ ಆತಂಕಗಳನ್ನು ಅಂದಿನ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ ಮೇರೆ ಅವರು ಇದರ ಬಗ್ಗೆ ಗಮನ ಹರಿಸಿ ಈ ಒಂದು ರ್ಯಾಫ್ಟಿಂಗ್ ಕಾರ್ಯಕ್ರಮವನ್ನು ಜಂಗಲ್ ಲಾಡ್ಜ್ ಮುಖಾಂತರವೇ ನಡೆಸುವಂತೆ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆಂದು ತಿಳಿಯಲಾಯಿತು.

ಈ ಮೇಲಿನ ಕಾರಣಗಳಿಂದ ಮತ್ತು ತಾವು ಇತ್ತೀಚೆಗೆ ಕೊಡಗು ಜಿಲ್ಲೆಯ ಕಾವೇರಿ ನದಿ ತಟದಲ್ಲಿ ರ್ಯಾಫ್ಟಿಂಗ್‍ನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಯ ಕಾರಣಗಳಿಂದಾಗಿ ಮತ್ತು ಈ ಒಂದು ರ್ಯಾಫ್ಟಿಂಗ್ ಕ್ರೀಡೆಯನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿರುವದರಿಂದ ಅದರಿಂದ ಎದುರಿಸಬೇಕಾದ ಅಪಾಯಕಾರಿ ದುರಂತಗಳನ್ನು ಮತ್ತು ಕಾನೂನಿನ ಉಲ್ಲಂಘನೆಯನ್ನು ಶಾಶ್ವತವಾಗಿ ನಿಯಂತ್ರಿಸಬೇಕಾಗಿರುವದರಿಂದ ತಾವು ತಾತ್ಕಾಲಿಕವಾಗಿ ಹೊರಡಿಸಿರುವ ಆದೇಶವನ್ನು ಶಾಶ್ವತ ಆದೇಶವನ್ನಾಗಿ ಪರಿವರ್ತಿಸಬೇಕಾಗಿದೆ ಪ್ರವಾಸಿಗರ ಹಾಗೂ ಹಿತದೃಷ್ಟಿಯಿಂದ, ಕಾನೂನಿನ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ರ್ಯಾಫ್ಟಿಂಗ್ ದಂಧೆಯಿಂದ ಇತ್ತೀಚಿನ ವರ್ಷಗಳಲ್ಲಿ ಕಾನೂನಿನ ಉಲ್ಲಂಘನೆಯಿಂದ ಹಲವಾರು ಪ್ರವಾಸಿಗರು ಮೃತಪಟ್ಟು ಜಿಲ್ಲಾಡಳಿತ ಎದುರಿಸಬೇಕಾದಂತಹ ಕ್ರಮಗಳಿಂದ ತಪ್ಪಿಸಿಕೊಳ್ಳಲು ಈ ಒಂದು ರ್ಯಾಪ್ಟಿಂಗ್ ಕಾರ್ಯಕ್ರಮವನ್ನು ಮುಂದುವರಿಸಬೇಕೆಂದು ಜಿಲ್ಲಾಡಳಿತ, ಅರಣ್ಯ ಮತ್ತು ಪರಿಸರ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥರು ತೀರ್ಮಾನಿಸಿದರೆ ಈ ಒಂದು ಸಾಹಸಿ ಕ್ರೀಡೆಯ ಜವಾಬ್ದಾರಿಕೆಯನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಮತ್ತು ಪ್ರವಾಸಿಗರು ಹಾಗೂ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಂಗಲ್ ಲಾಡ್ಜ್‍ನ ಆಡಳಿತಕ್ಕೆ ವಹಿಸಲು ತಾವು ಆಡಳಿತಾತ್ಮಕ ತೀರ್ಮಾನವನ್ನು ಕೈಗೊಳ್ಳಬೇಕೆಂದು ತಮ್ಮನ್ನು ಈ ಮೂಲಕ ಕೋರುತ್ತೇನೆ ಎಂದು ಪತ್ರದಲ್ಲಿ ನಾಣಯ್ಯ ಸಲಹೆ ಮಾಡಿದ್ದಾರೆ.