ಶ್ರೀಮಂಗಲ, ಮಾ. 8: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯನ್ನು ತಾಲೂಕು ಕೇಂದ್ರ ವೀರಾಜಪೇಟೆ ಪಟ್ಟಣಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕ ಮಾಡುವ ಕೂಟಿಯಾಲ ರಸ್ತೆ ಕಳೆದ 18 ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಲಕ್ಷಾಂತರ ರೂ ಸಾರ್ವಜನಿಕ ಹಣದಲ್ಲಿ ಸೇತುವೆ ನಿರ್ಮಾಣವಾಗಿದ್ದರೂ ಸಂಪರ್ಕ ರಸ್ತೆ ಜೋಡಿಸಲು ಉಂಟಾಗಿರುವ ತೊಡಕನ್ನು ಸರಿಪಡಿಸಲು ಸ್ಥಳೀಯ ಗ್ರಾಮಸ್ಥರೇ ಸಮಿತಿ ರಚನೆ ಮಾಡಿ ಕಾರ್ಯ ತತ್ಪರವಾಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಾ.ಪಂ. ಮಾಜಿ ಸದಸ್ಯ ಬೊಳ್ಳೇರ ಅಪ್ಪುಟ ಪೊನ್ನಪ್ಪ ತಿಳಿಸಿದ್ದಾರೆ.

ಬಿರುನಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜಿನಡಿ ಬಿಡುಗಡೆಯಾದ ರೂ 30 ಲಕ್ಷ ಅನುದಾನದÀಲ್ಲಿ ಹಮ್ಮಿಕೊಂಡಿರುವ ಗ್ರ್ರಾಮೀಣ ರಸ್ತೆಗಳÀ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕಳೆದ 18 ವರ್ಷಗಳಿಂದ ಜನಪ್ರತಿ ನಿಧಿಗಳು ಈ ರಸ್ತೆ ಜೋಡಿಸಲು ಉಂಟಾಗಿರುವ ಅಡೆತಡೆಗಳನ್ನು ಸರಿಪಡಿಸಲು ಇಚ್ಛಾಶಕ್ತಿ ತೋರುತ್ತಿಲ್ಲ. ಆದ್ದರಿಂದ ಗ್ರಾಮಸ್ಥರೇ ಸಮಿತಿ ರಚನೆ ಮಾಡಿ ಈ ಭಾಗದ ಜನರಿಗೆ ಹೆಚ್ಚು ಪ್ರಯೋಜನವಾಗುವ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಣ್ಣಳಮಾಡ ಲಾಲಅಪ್ಪಣ್ಣ ಮಾತನಾಡಿ, ಬಿರುನಾಣಿ ಗ್ರಾ.ಪಂ ವ್ಯಾಪ್ತಿಯನ್ನು ಪೊನ್ನಂಪೇಟೆ-ಗೋಣಿಕೊಪ್ಪಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕಿಸುವ ಪೊರಾಡು-ಹೈಸೊಡ್ಲೂರು ಸಂಪರ್ಕ ರಸ್ತೆ ಹಾಗೂ ಸೇತುವೆ ಯೋಜನೆ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಸೇತುವೆ ಕಾಮಗಾರಿಯ ಸ್ವಲ್ಪ ಭಾಗ ಮಾತ್ರ ಬಾಕಿ ಉಳಿದಿದೆ. ಮಳೆಗಾಲ ಮುನ್ನ ಈ ಸಂಪರ್ಕ ರಸ್ತೆ ಕಾಮಗಾರಿ ಯನ್ನು ಮುಗಿಸಿ ಗುತ್ತಿಗೆದಾರರು ಸಂಚಾರಕ್ಕೆ ನಿಯಮದಂತೆ ಒದಗಿಸಬೇಕಾಗಿದೆ ಎಂದು ಹೇಳಿದರು.

ರೂ 30 ಲಕ್ಷ ಸಿ.ಎಂ. ವಿಶೇಷ ಪ್ಯಾಕೇಜಿನ ಅನುದಾನದಲ್ಲಿ ಪರಕಟಗೇರಿ ಗ್ರ್ರಾಮದ ಅಣ್ಣಳಮಾಡ, ನೆಲ್ಲೀರ ಗಣೇಶ ಹಾಗೂ ಕುಟುಂಬಸ್ಥರ ರಸ್ತೆ, ಬಿರುನಾಣಿ ಗ್ರಾಮದಲ್ಲಿ ಗುಡ್ಡಮಾಡ ಚಂಗಪ್ಪ, ಚೇರಂಡ ಕಾರ್ಯಪ್ಪ ಹಾಗೂ ಕುಟುಂಬಸ್ಥರ ರಸ್ತೆ, ತೆರಾಲು ಗ್ರಾಮದಲ್ಲಿ ಚಾಮುಂಡಿ ಪಾರೆ ರಸ್ತೆ, ಬೊಳ್ಳೆರ ಪೊನ್ನಪ್ಪ, ಬೊಟ್ಟಂಗಡ ಪ್ರೇಮ್ ಹಾಗೂ ಬೊಟ್ಟಂಗಡ ಈಶ್ವರ ಕುಟುಂಬಸ್ಥರ ರಸ್ತೆ, ಬಾಡಗರಕೇರಿ ಪೊರಾಡು ಗ್ರಾಮದಲ್ಲಿ ಮಲ್ಲೇಂಗಡ ಸನ್ನಿ ಹಾಗೂ ಬಲ್ಯಮೀದೇರಿರ ಶರಣು ಚಂಗಪ್ಪ ಮತ್ತು ಕುಟುಂಬಸ್ಥರ ರಸ್ತೆ ಸೇರಿ 10 ಗ್ರಾÀ್ರಮೀಣ ರಸ್ತೆಗಳಿಗೆ ಸಮನಾಂತರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಇದಲ್ಲದೆ ಈ ವ್ಯಾಪ್ತಿಗೆ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜಿನ 2ನೇ ಹಂತದ 80 ಲಕ್ಷ ಅನುದಾನದಲ್ಲಿ 16 ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಗೊಳ್ಳಲಾಗುತ್ತಿದೆ. ಈ ಅನುದಾನದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಈ ಸಂದರ್ಭ ಗ್ರಾ.ಪ. ಮಾಜಿ ಸದಸ್ಯರುಗಳಾದ ಕರ್ತಮಾಡ ಸುನಂದ, ನೆಲ್ಲೀರ ನೆಹರು, ಅಣ್ಣಳಮಾಡ ಸುರೇಶ್, ಕಳಕಂಡ ಪೂಣಚ್ಚ, ಕುಪ್ಪಣಮಾಡ ಪ್ರೀತಂ, ಅಣ್ಣಳಮಾಡ ಗಿರೀಶ್ ಮತ್ತಿತರರು ಹಾಜರಿದ್ದರು.