ಮಡಿಕೇರಿ, ಮಾ. 8: ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕರುಣೆ ಇಲ್ಲದ ಮಾಲೀಕನ ಅವಕೃಪೆಯಿಂದ ಮುಗ್ಧ ಕರುವೊಂದು ನಿಂತಿತ್ತು. ರಾತ್ರಿ ನಿಲ್ದಾಣದೊಳಗೆ ಪ್ರವೇಶಿಸಿದ ಬಸ್‍ನ ಚಾಲಕ ಅದಕ್ಕೆ ಬಸ್ ಅನ್ನು ಗುದ್ದಿ ಸದ್ದಿಲ್ಲದೆ ಮನೆ ತಲಪಿದ. ನೋವಿನಿಂದ ನರಳಿದ ಕರು ಮುಂಜಾನೆ ಅಸುನೀಗಿತು.

ಅಮಾಯಕ ಪಶುವಿನ ಸಾವಿಗೆ ಕಾರಣನಾದ ಮಾಲೀಕ ಮತ್ತು ಚಾಲಕ ಯಾವ ಜಾಮಿನಿಗೂ ಅರ್ಜಿ ಹಾಕಿಲ್ಲ; ಕಾರಣ ಮೂಕ ಪ್ರಾಣಿಯ ಸಾವಿಗೆ ಮರುಗಿ ಕೇಸು ಹಾಕುವವರು ಯಾರೂ ಇಲ್ಲ! -ಚಿತ್ರ: ಟಿ.ಜಿ. ಸತೀಶ್