ಶ್ರೀಮಂಗಲ, ಮಾ. 8: ಬೆಂಗಳೂರಿನಲ್ಲಿ ನಡೆದ 39 ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ 18ನೇ ಮದ್ರಾಸ್ ರೆಜಿಮೆಂಟ್ (ಮೈಸೂರು ಇನ್ಫೆಂಟರಿ) ನ ನಿವೃತ್ತ ಯೋಧ ಅಮ್ಮತ್ತಿ ಗ್ರಾಮದ ಪಟ್ರಪಂಡ ಚಂಗಪ್ಪ(ಸೋಮೇಶ್) ಅವರು 400 ಮೀ. ಲೋ ಹರ್ಡಲ್ಸ್ ನಲ್ಲಿ 3ನೇ ಸ್ಥಾನ ಪಡೆದು ಕಂಚಿನ ಪದಕ, 400 ಮೀ. ರಿಲೇ ಯಲ್ಲಿ 2ನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾರೆ. ಇವರು ಸ್ಪೇಯಿನ್ ದೇಶದಲ್ಲಿ ನಡೆಯಲಿರುವ ಏಷಿಯನ್ ಮೇಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.