ಮಡಿಕೇರಿ, ಮಾ. 7: ಪೆರಾಜೆಯ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಯುವ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ಗೌಡ ಜನಾಂಗದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಇಂದು ತೆರೆ ಬಿದ್ದಿದ್ದು, ಅಂತಿಮವಾಗಿ ಊರುಬೈಲು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಳುವಾರು ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಉಳುವಾರು ತಂಡ ಪ್ರಥಮ ಸ್ಥಾನ ಗಳಿಸಿದರೆ, ಬಳ್ಳಡ್ಕ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಇಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಊರುಬೈಲು ತಂಡ 8 ಓವರ್‍ನಲ್ಲಿ 3 ವಿಕೆಟ್‍ಗೆ 87 ರನ್ ಕಲೆ ಹಾಕಿತ್ತು. ಅದನ್ನೆದುರಿಸಲು ಮುಂದಾದ ಉಳುವಾರು ತಂಡ ಉತ್ತಮ ಪ್ರದರ್ಶನ ನೀಡಿತ್ತಾದರೂ ಕೊನೆ ಘಳಿಗೆಯಲ್ಲಿ 6 ವಿಕೆಟ್ ಕಳೆದು ಕೊಂಡು 66 ರನ್ ಗಳಿಸಿ 21 ರನ್‍ಗಳ ಅಂತರದಿಂದ ಸೋಲನುಭವಿಸಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್‍ನಲ್ಲಿ
(ಮೊದಲ ಪುಟದಿಂದ) ಊರುಬೈಲು ತಂಡ ಸುಳ್ಯಕೋಡಿ ತಂಡವನ್ನು ಮಣಿಸಿ ಫೈನಲ್‍ಗೇರಿದರೆ, ಉಳುವಾರು ತಂಡ ಪಡ್ಡಂಬೈಲು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಪಂದ್ಯಾವಳಿಯ ಆಲ್‍ರೌಂಡರ್ ಪ್ರಶಸ್ತಿಯನ್ನು ಮೋಕ್ಷಿತ್ ಉಳುವಾರು ಪಡೆದುಕೊಂಡರೆ, ಬೆಸ್ಟ್ ಬ್ಯಾಟ್ಸ್‍ಮೆನ್ ಆಗಿ ಕುಡೆಕಲ್ ಕಾರ್ತಿಕ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಊರುಬೈಲು ಲೋಕೇಶ್ ಪಡೆದುಕೊಂಡರು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಉಳುವಾರು ತಂಡ ಪ್ರಥಮ ಸ್ಥಾನ ಪಡೆದರೆ, ಬಳ್ಳಡ್ಕ ತಂಡ ದ್ವಿತೀಯ ಸ್ಥಾನ ಗಳಿಸಿತು. ಶಾಸಕ ಕೊಂಬಾರನ ಬೋಪಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಗೌಡ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ, ನಿಡ್ಯಮಲೆ ಕುಟುಂಬದ ಯಜಮಾನ ಬೋಜಪ್ಪ, ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ನಿಡ್ಯಮಲೆ ಕುಟುಂಬದ ಉಪಾಧ್ಯಕ್ಷ ನಂಜಪ್ಪ, ಸುಳ್ಯ ರೋಟರಿ ಅಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಮಹಿಳಾ ಸಂಘದ ಅಧ್ಯಕ್ಷೆ ಚಿತ್ರಾ ಲೋಕಯ್ಯ ಅವರುಗಳು ಬಹುಮಾನ ವಿತರಣೆ ಮಾಡಿದರು.