ಚೆಟ್ಟಳ್ಳಿ, ಮಾ. 5: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಭಗವತಿ ದೇವಿಗೆ ಹೂವಿನ ವಿಶೇಷ ಅಲಂಕಾರ ವಸ್ತ್ರಾಭರಣ ದೊಂದಿಗೆ ಅಲಂಕರಿಸಿ ಬಿಳಿಕುಪ್ಪಸ ದಟ್ಟಿಯನ್ನು ತೊಟ್ಟಂತಹ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರ ಮನೆಯಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ದೇವ ತಕ್ಕ ಮುಖ್ಯಸ್ಥರುಗಳಾದ ಚೇರಳತಮ್ಮಂಡ ಆನಂದ ಹಾಗೂ ಕೊಂಗೇಟಿರ ಹರೀಶ್ ಅಪ್ಪಣ್ಣ ಅವರ ಸಮ್ಮುಖದಲ್ಲಿ ದೇವಾಲಯದ ವಾರ್ಷಿಕೋತ್ಸವದ ವಿಧಿüವಿಧಾನ ಗಳನ್ನು ಸಂಪ್ರದಾಯ ಬದ್ಧವಾಗಿ ಮಾಡಿ ನೆಂಟರಿಷ್ಟರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಊರಿನವರು ದೇವರ ನೆಡೆಗೆಬಂದು ದೇವಾಲಯದಲ್ಲಿ ಇಟ್ಟಂತ ಜಿಂಕೆ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ಬಂದು ದೇವಾಲಯದ ಬಲಭಾಗದಲ್ಲಿ ಕೆಂಪುವಸ್ತ್ರದಾರಿಯಾಗಿ ನಿಂತ ಮೇದರ ಕೊಟ್ಟಿಗೆ ಹೋವಯ್ಯ ಹೋ.... ಹೋವಯ್ಯ ಹೋ.... ಎಂದು ದೇವರನ್ನು ಪ್ರಾರ್ಥಿಸುತ್ತಾ 18 ತರಹದ ವಿಶೇಷವಾದ ಕೊಂಬಾಟ್ ನೃತ್ಯ ಮಾಡಿದರು.