ಮಡಿಕೇರಿ: ಕಂಗೊಳಿಸಲಿದೆ ಮಡಿಕೇರಿಯ ರಾಜಾಸೀಟು ವೈವಿಧ್ಯಮಯ ಪುಷ್ಪ ನಿರ್ಮಿತ ಮಾದರಿಗಳ ಮೂಲಕ. ಅವುಗಳಲ್ಲಿ ಮುಖ್ಯವಾಗಿ ಮಡಿಕೇರಿಯ ಐತಿಹಾಸಿಕ ಕೋಟೆ ಮಾದರಿ ತಯಾರಿಕೆಯೂ ಒಳಗೊಂಡಿದೆ. ಈಗಾಗಲೇ ಉದ್ಯಾನವನದಲ್ಲಿ ಕೋಟೆ ಮಾದರಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ.

ತಾ. 9 ರಿಂದತಾ. 11 ರವರೆಗೆ ರಾಜಾಸೀಟಿನಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಟ್ಟಿದ್ದು ಇದಕ್ಕಾಗಿ ಈ ಭರದ ಸಿದ್ಧತೆ ನಡೆದಿದೆ.

ಇನ್ನೊಂದೆಡೆ ಕೊಡಗಿನ ಪವಿತ್ರ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿನ ತೀರ್ಥೋದ್ಭವ ಮಾದರಿಯೊಂದು ತಯಾರಾಗುತ್ತಿದೆ. ಈ ಎಲ್ಲ ಮಾದರಿಗಳ ತಯಾರಿಕೆಗೆ ವಿವಿಧ ಪುಷ್ಪಗಳನ್ನು ಬಳಸಿ ಆಕರ್ಷಣೆಗೊಳಿಸಲಾಗುತ್ತದೆ. ಮಾಳಿಗೆ ಉದ್ಯಾನ. ಅಡುಗೆ ಮನೆ ಉದ್ಯಾನ, ಭಾರೀ ಎತ್ತರಕ್ಕೆ ಲಂಬಾಕಾರದ ಉದ್ಯಾನಗಳು ರೂಪುಗೊಳ್ಳುತ್ತಿವೆ. ನೆರಳಿನ ಬಲೆಯ ಛಾವಣಿ, ಪಾಲಿ ಹೌಸ್- ಹೀಗೆ ಹಲವಾರು ಮಾದರಿಗಳು ಈ ಬಾರಿಯ ವಿಶೇಷ. ಇಷ್ಟು ಮಾತ್ರವಲ್ಲ; ಆನೆ, ಜಿಂಕೆ, ಹುಲಿ- ಈ ಪ್ರ್ರಾಣಿಗಳ ಪುಷ್ಪ ಮಾದರಿಯೊಂದಿಗೆ ಮಾವು, ಕಿತ್ತಳೆ, ಅನಾನಸ್ ಮಾದರಿಗಳು, ಜೊತೆಗೆ ಸೈಕಲ್, ಕಾರು ಮಾದರಿಗಳೂ ತಯಾರಾಗಲಿವೆ.

ವಿವಿಧ ಸಹಯೋಗ

ಇಷ್ಟೆಲ್ಲ ವ್ಯವಸ್ಥೆಗಳನ್ನು ಏರ್ಪಡಿಸಲು ಸರಕಾರೀ ತೋಟಗಾರಿಕಾ ಇಲಾಖಾ ಅಂಗ

(ಮೊದಲ ಪುಟದಿಂದ) 'ಸಂಸ್ಥೆಯಾದ ಬೆಂಗಳೂರಿ ನನರ್ಸರಿ ಮೆನ್ ಕೋ ಆಪರೇಟಿವ್ ಸೊಸೈಟಿ ಮೂಲಕ ಸರಕಾರೀ ನಿಗದಿತ ಕಡಿಮೆ ದರದಲ್ಲಿ ಸಿದ್ಧತೆ ನಡೆಯುತ್ತಿದೆ. ಇದರಿಂದಾಗಿ ಒಟ್ಟು ರೂ. 13 ಲಕ್ಷ ವೆಚ್ಚದಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ನಡೆಸಲಾಗುತ್ತಿರುವದಾಗಿ ‘ಶಕ್ತಿ’ ಗೆ ತಿಳಿದುಬಂದಿದೆ.

ಮತ್ತೊಂದೆಡೆ ಬೆಂಗಳೂರಿನ ಡೈರಿ ಡೇ ಕಂಪೆನಿಯೂ ಸಹಕರಿಸುತ್ತಿದ್ದು ವಿವಿಧ ರೀತಿಯ ತರಕಾರಿ ಕೆತ್ತನೆ, ಬೋನ್ಸಾಯ್ ಗಿಡಗಳ ಜೋಡಣೆಗಳನ್ನು ಏರ್ಪಡಿಸಲಿದೆ. ಅಲ್ಲದೆ ಡೈರಿಡೇನಿಂದ ಆಕರ್ಷಕ ಐಸ್ಕ್ರೀಂ ಮಾದರಿಯೊಂದೂ ತಯಾರಾಗಲಿವೆ. ಸಾರ್ವಜನಿಕರು, ರೈತರು ತಾವು ಬೆಳೆದ ವಿಶೇಷ ಹಾಗೂ ಅತ್ಯುತ್ತಮ ಮಾದರಿಯ ತರಕಾರಿ, ಹಣ್ಣು ಹಾಗೂ ಪುಷ್ಪಗಳನ್ನು ಪ್ರದರ್ಶಿಸಲು ಅವಕಾಶವಿದೆ. ತಾ. 9 ರ ಬೆಳಿಗ್ಗೆ ಇವುಗಳನ್ನು ರಾಜಾಸೀಟಿಗೆ ತಂದಿಡಲು ಕೋರಲಾಗಿದೆ. ಕೃಷಿ ಇಲಾಖೆಯಿಂದ ಅತ್ಯುತ್ತಮ ವಾದವುಗಳಿಗೆ ಬಹುಮಾನವನ್ನೂ ನೀಡಲಾಗುವದು. ಜೊತೆಗೆ ಸ್ಥಳದಲ್ಲಿ ಕೆತ್ತನೆ, ಹೂ ಜೋಡಣೆ, ರಂಗೋಲಿ ಸ್ಪರ್ಧೆಗಳನ್ನೂ ಏರ್ಪಡಿಸಲಾಗುವದು.

3 ದಿನಗಳ ಕಾಲ ಪ್ರದರ್ಶನ ಸಂದರ್ಭ ಸಂಜೆ 6 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸ ಲಾಗಿದೆ. ಕೊಡವ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಆಕಾಡೆಮಿ ಮತ್ತಿತರ ಸಂಸ್ಥೆಗಳಿಗೆ ಈ ಜವಾಬ್ದಾರಿಕೆ ನೀಡಲಾಗಿದೆ. ಆದರೆ, ಹಗಲು ವೇಳೆ ಶಬ್ದ ಮಾಲಿನ್ಯ ವಾಗದಂತೆ ಎಚ್ಚರ ವಹಿಸಲಾಗಿದೆ. ಏಕೆಂದರೆ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿರುವದರಿಂದ ಸಂಜೆ ವೇಳೆ ಮಾತ್ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಳಿಗೆಗಳ ನಿರ್ಮಾಣ

ಗಾಂಧಿ ಮೈದಾನದಲ್ಲ್ಲಿ 50 ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಸ್ಥಾಪಿಸಲಾಗುವದು. ಜಿಲ್ಲಾಧಿಕಾರಿ ಯವರು ಅನುಮತಿ ನೀಡಿದ್ದು ಮಡಿಕೇರಿ ನಗರ ಸಭೆಯ ಜವಾಬ್ದಾರಿಕೆಯಲ್ಲಿ ಡೈರಿಡೇ ಸಹಯೋಗದಲ್ಲಿ ಇದರ ನಿರ್ವಹಣೆಯಾಗಲಿದೆ. 12 ಮಳಿಗೆಗಳು ಮುಖ್ಯವಾಗಿ ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಮತ್ತುಇತರ ಇಲಾಖೆಗಳಿಗೆ ನಿಗದಿಯಾಗಿದ್ದು ಪ್ರಮುಖವಾಗಿ ತೋಟಗಾರಿಕೆ, ಕೃಷಿ ವಸ್ತುಗಳ ಪ್ರದರ್ಶನಕ್ಕೆ ಈ ಮಳಿಗೆಗಳಲ್ಲಿ ಆದ್ಯತೆ ನೀಡಲಾಗುವದು. ಸ್ತ್ರೀ ಶಕ್ತಿ ಸಂಘಟನೆಗಳಿಗೂ ಆದ್ಯತೆ ನೀಡ ಲಾಗುವದು. ಅಲ್ಲದೆ ಭಾಗಮಂಡಲದ ಜೇನು ಕೃಷಿ ಸಹಕಾರ ಸಂಘದ ಮಳಿಗೆÀಯೊಂದಕ್ಕೆ ಅವಕಾಶ ನೀಡಲಾಗುವದು. ಇನ್ನುಳಿದ ಮಳಿಗೆ ಗಳನ್ನು ವಾಣಿಜ್ಯ ವಹಿವಾಟಿಗಾಗಿ ಬಿಟ್ಟು ಕೊಡಲಾಗುವದು. ಗಾಂಧಿ ಮೈದಾನದಲ್ಲಿನ ಆಹಾರ ಮಳಿಗೆಗಳಲ್ಲಿ ಕೇವಲ ಸಸ್ಯಾಹಾರೀ ಆಹಾರ ತಯಾರಿಕೆಗೆ ಮಾತ್ರ ಅನುಮತಿ ನೀಡಲಾಗುವದಾಗಿ ತಿಳಿದುಬಂದಿದೆ.

ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕ ಶೌಚಾಲಯಗಳು ನಿರ್ಮಾಣ ಗೊಳ್ಳಲಿದ್ದು, ಶುಚಿತ್ವದ ಜವಾಬ್ದಾರಿಕೆಯನ್ನು ಜಿಲ್ಲಾ ಪಂಚಾಯತ್‍ಗೆ ವಹಿಸಿಕೊಡಲಾಗಿದೆ. ಅಲ್ಲದೆ ಸ್ವಚ್ಛ ಭಾರತ್ ಮಿಷನ್‍ನ ಮಾದರಿಯೂ ಈ ಸಂದರ್ಭಜಿಲ್ಲಾ ಪಂಚಾಯತ್ ವತಿಯಿಂದ ಪ್ರದರ್ಶನ ಗೊಳ್ಳುತ್ತಿರುವದು ಮತ್ತೊಂದು ವಿಶೇಷ, ನಗÀರ ಸಭೆಯಿಂದ ಕುಡಿಯವ ನೀರು ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಜನರಒತ್ತಡ ಹತೋಟಿಗಾಗಿ ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತುಗೈಡ್ಸ್ ಸಂಸ್ಥೆಂiÀÀು ಸಹಕಾರವನ್ನೂ ಕೋರಲಾಗಿದೆ.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕಾ ಇಲಾಖೆಗಳ ಸಹಯೊಗದಲ್ಲಿ ಈ ಫಲಪುಷ್ಪ ಪ್ರದರ್ಶನ ಏರ್ಪಟ್ಟದೆ. ‘ಶಕ್ತಿ’ ಗೆ ತಿಳಿದುಬಂದಂತೆ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಹಾಗೂ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರು (ರಾಜ್ಯವಲಯ) ಮತ್ತು ಜಿಲ್ಲಾ ತೋಟಗಾರಿಕಾ ಪ್ರಬಾರ ನಿರ್ದೇಶಕಿ ಕೆ.ಪಿ.ದೇವಕಿ ಇವರುಗಳ ಸಮಾಲೋಚನೆಯಲ್ಲಿ ಈ ಬಾರಿ ವ್ಯವಸ್ಥಿತ ರೀತಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ದುರಸ್ತಿಗೊಂಡಿದ್ದ ಸಂಗೀತ ಕಾರಂಜಿಯನ್ನು ಈಗಷ್ಟೇ ಸರಿಪಡಿಸಿರುವ ಪ್ರಬಾರ ನಿರ್ದೇಶಕರು, ರಾಜಾಸೀಟಿನಲ್ಲಿ ನೂತನ ಪುಷ್ಪ ರಾಶಿಗಳ ಬೆಳವಣಿಗೆಗೂ ಕ್ರಮಕೈಗೊಂಡಿದ್ದು ಇದೀಗ ರಾಜಾಸೀಟಿಗೆ ಹೊಸ ಕಳೆ ಬಂದಿದೆ. ನೂತನ ಹೂಕುಂಡಗಳು ರಾರಾಜಿಸುತ್ತಿವೆ. ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾಅವರೂ ಫಲ ಪುಷ್ಪ ಪ್ರದರ್ಶನ ವ್ಯವಸ್ಥೆಗೆ ಕೈಜೋಡಿಸಿದ್ದಾರೆ.

-ಚಿತ್ರ ವರದಿ:”ಚಕ್ರವರ್ತಿ”