ಗುಡ್ಡೆಹೊಸೂರು, ಮಾ. 5: ಗ್ರಾ. ಪಂಚಾಯ್ತಿ ವ್ಯಾಪ್ತಿಯಲ್ಲಿನ ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲಾ ಆವರಣದಲ್ಲಿ ವಿಶೇಷ ಅನುದಾನದಡಿ ರೂ. 1 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನಡೆಸಿದರು.

ಹೊಸಕಾಡು ರಸ್ತೆಯಲ್ಲಿ ರೂ. 90 ಲಕ್ಷದಲ್ಲಿ ಕಾಮಗಾರಿ ನಡೆಸಲು ಪೂಜೆ ನಡೆಸಲಾಯಿತು. ಚಿಕ್ಕ ಬೆಟ್ಟಗೇರಿಯ ಕೆರೆಮೂಲೆ ರಸ್ತೆಯಲ್ಲಿ ರೂ. 90 ಲಕ್ಷದಲ್ಲಿ ರಸ್ತೆ ಕಾಮಗಾರಿ ಮಾದಪಟ್ಟಣದಲ್ಲಿ ರೂ. 1 ಕೋಟಿ 20 ಲಕ್ಷದಲ್ಲಿ ರಸ್ತೆ ಕಾಮಗಾರಿಗೆ ಶಾಸಕರು ಪೂಜೆ ನಡೆಸಿದರು. ಈ ಕಾಮಗಾರಿಗಳು ನೀರಾವರಿ ಇಲಾಖೆ ವತಿಯಿಂದ ನಡೆಯುತ್ತಿರುವದಾಗಿ ಅಪ್ಪಚ್ಚು ರಂಜನ್ ಮಾಹಿತಿ ನೀಡಿದರು. ಈ ಎಲ್ಲಾ ಕಾಮಗಾರಿಯ ಪೂಜೆಯನ್ನು ಜಿ.ಪಂ. ಸದಸ್ಯ ಲತೀಫ್ ಮತ್ತು ಅಪ್ಪಚ್ಚು ರಂಜನ್ ನೆರವೇರಿಸಿದರು.

ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಮತ್ತು ಸದಸ್ಯರು ಹಾಜರಿದ್ದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಕೆ. ಚಿದಾನಂದ, ಮಾಜಿ ಸದಸ್ಯ ಎಂ.ಆರ್. ಉತ್ತಪ್ಪ ಹಾಗೂ ಪಿ.ಡಿ.ಓ. ಶ್ಯಾಂ ಮತ್ತು ನೀರಾವರಿ ಇಲಾಖಾ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ಇಂಜಿನಿಯರ್ ಜಗದೀಶ್ ಮುಂತಾದವರು ಹಾಜರಿದ್ದರು.