ಮಡಿಕೇರಿ, ಮಾ. 5: ಆಭ್ಯತ್‍ಮಂಗಲ ನಿವಾಸಿ ಶೇಖರ್ ಎಂಬವರ ಪತ್ನಿ ವಿಜು (32) ಎಂಬಾಕೆ ತಾ. 3 ರಂದು ಮನೆಯಿಂದ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಹಚ್ಚಿಕೊಡಬೇಕೆಂದು ಪತಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.