ಮಡಿಕೇರಿ, ಮಾ. 5: ಭಾರತೀಯ ವಾಯುಪಡೆಯಲ್ಲಿ
ಏರ್‍ಮೆನ್ ಗ್ರೂಪ್ ವೈ ಹುದ್ದೆಗಳ ಭರ್ತಿಗಾಗಿ ತಾ. 18 ರಂದು ನೇಮಕಾತಿ ರ್ಯಾಲಿಯು ಚಿತ್ರದುರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ನೇರವಾಗಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದ್ದು, ವಿದ್ಯಾರ್ಹತೆ ಪಿ.ಯು.ಸಿ. ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್‍ನೊಂದಿಗೆ ಕನಿಷ್ಟ ಶೇ. 50 ಅಂಕವನ್ನು ಹೊಂದಿರಬೇಕು. ಹಾಗೂ ಇಂಗ್ಲೀಷ್‍ನಲ್ಲಿ ಕನಿಷ್ಟ 50 ಅಂಕಗಳನ್ನು ಹೊಂದಿದ್ದು, ವಯೋಮಿತಿ 13.1.1998 ರಿಂದ 2.1.2002 ರೊಳಗೆ ಜನಿಸಿರಬೇಕು. ಹೆಚ್ಚಿನ ಮಾಹಿತಿ ಮಡೆಯಲು ವೆಬ್‍ಸೈಟ್ ತಿತಿತಿ.ಚಿiಡಿmeಟಿ seಟeಛಿಣioಟಿ.ಛಿಜಚಿಛಿ.iಟಿ ಅಥವಾ ತಿತಿತಿ. ಛಿಚಿಡಿeeಡಿಚಿiಡಿಜಿoಡಿಛಿe.ಛಿಜಚಿಛಿ.iಟಿ ನಿಂದ ಪಡೆಯಹುದು. ಅಥವಾ 7 ಏರ್‍ಮೆನ್ ಸೆಲೆಕ್ಷನ್ ಸೆಂಟರ್, ನಂ. 1 ಕಬ್ಬನ್ ರಸ್ತೆ, ಬೆಂಗಳೂರು 560001 (080-25592199) ಸಂಪರ್ಕಿಸಬಹುದು.