ವೀರಾಜಪೇಟೆ, ಮಾ. 5: ಕೇರಳದ ಉಳಿಕಲ್‍ನ ವಿಷ್ಣುಮೂರ್ತಿ ದೇವಾಲಯದಲ್ಲಿ ತಾ. 8 ಹಾಗೂ 9 ರಂದು ಕಳಿಯಾಟ ಉತ್ಸವ ಹಾಗೂ ಚಾಮುಂಡಿ ತೆರೆ ಮಹೋತ್ಸವ ನಡೆಯಲಿದೆ ಎಂದು ಆದಿ ಬೈತೂರು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪುಗ್ಗೇರ ಪೊನ್ನಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊನ್ನಪ್ಪ ಅವರು ಬೈತೂರು ದೇವಾಲಯ ಹಾಗೂ ಕೊಡಗಿನ ಭಕ್ತಾದಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವಿಷ್ಣುಮೂರ್ತಿ ದೇವಾಲಯದಲ್ಲಿ ವಿಶೇಷವಾಗಿ ಚಾಮುಂಡಿ ತೆರೆ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುವದು ಎಂದರು.

ವಿಷ್ಣುಮೂರ್ತಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪ್ರದೀಪ್ ಮಾತನಾಡಿ ತಾ. 8 ರಂದು ಬೆಳಿಗ್ಗೆ 10 ಗಂಟೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ತೆರೆ ಉತ್ಸವಕ್ಕೆ ಚಾಲನೆ ಸಂಜೆ 6.30ಕ್ಕೆ ದೀಪಾರಾಧನೆ. ರಾತ್ರಿ 7 ಗಂಟೆಗೆ ತೋತ ಆಟ, ರಾತ್ರಿ 10ಗಂಟೆಗೆ ಜ್ಯೋತಿಗಳೊಂದಿಗೆ ಘೋಷ ಯಾತ್ರೆ ಜರುಗಲಿದೆ ಎಂದರು. ತಾ. 9 ರಂದು ಬೆಳಗ್ಗಿನ ಜಾವ 2 ಗಂಟೆಗೆ ಪೊಕುಟ್ಟಿ ಶಾಸ್ತಪ್ಪನ್ ತೆರೆ, 2.30ಕ್ಕೆ ರಕ್ತೇಶ್ವರಿ ತೆರೆ, 4 ಗಂಟೆಗೆ ಕೋಕಾಡಿ ಚಾಮುಂಡಿ ಬೈತೂರು ದೇವಸ್ಥಾನಕ್ಕೆ ದರ್ಶನ ನೀಡುವದು ನಂತರ ನಿಚ್ಚಾಟ್ ಭಗವತಿ ದೇವಸ್ಥಾನಕ್ಕೆ ದರ್ಶನ ನೀಡುವದು. ಬೆಳಿಗ್ಗೆ 6 ಗಂಟೆಗೆ ಕಾಲ ಭೈರವ ತೆರೆ. ಬೆಳಿಗ್ಗೆ 10 ಗಂಟೆಗೆ ಮಡಿಯಲ್ ಚಾಮುಂಡಿ ತೆರೆ, 11 ಗಂಟೆಗೆ ಕರಿವಾಳ್ ತೆರೆ, 12 ಗಂಟೆಗೆ ಉಚ್ಚಿಟ್ಟ ಭಗವತಿ ತೆರೆ, 12.30ಕ್ಕೆ ಉಚ್ಚಿಟ್ಟ ಭಗವತಿ ಮೇಲೇರಿ, ಅಪರಾಹ್ನ 1 ಗಂಟೆಗೆ ದೇವರ ಕೂಟ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರದೀಪ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9663977304 ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ವೇಣುಗೋಪಾಲ್, ಮೋಹನ್ ಉಪಸ್ಥಿರಿದ್ದರು.