ಗೋಣಿಕೊಪ್ಪ, ಮಾ. 5 : ಮಾಯಮುಡಿಯ ಶ್ರೀ ಕಮಟೆ ಮಹಾದೇವರ ವಾರ್ಷಿಕ ಉತ್ಸವವು 4 ದಿನಗಳ ಕಾಲ ನಡೆದು ಸಂಪನ್ನಗೊಂಡಿತು. ಫೆ. 25 ರಂದು ಕೊಡಿ ಮರ ನಿಲ್ಲಿಸುವ ಮೂಲಕ ಆರಂಭಗೊಂಡ ಹಬ್ಬದಲ್ಲಿ ಈಶ್ವರನಿಗೆ ಬಿಲ್ವ ಪತ್ರಾರ್ಚನೆ ತೂಚಂಬಲಿ ಪೂಜೆ, ಈಶ್ವರನಿಗೆ ಕ್ಷೀರಾಭಿಷೇಕ ಮತ್ತು ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಕುಂಕುಮಾರ್ಚನೆ, ನೆರಪು ನಡೆಯಿತು. ಅಂತಿಮ ದಿನದಂದು ಮಹಾಪೂಜೆ, ದೇವರ ದರ್ಶನ, ಅಭ್ಯಂಜನ ಮತ್ತು ದೇವರ ನೃತ್ಯ, ವಸಂತ ಪೂಜೆ, ವಿಷ್ಣುಮೂರ್ತಿ ಮತ್ತು ಗುಳಿಗನಿಗೆ ಪೂಜೆ ನಡೆಯಿತು. ನಾಗನಿಗೆ ಪೂಜೆ ಮತ್ತು ರುದ್ರಾಭಿಷೇಕ ಪೂಜೆ ನಡೆದು ಸಂಪನ್ನಗೊಂಡಿತು. ಕೊನೆಯ ದಿನದ ಹಬ್ಬದಂದು ಆರ್ಟ್ ಆಫ್ ಲಿವಿಂಗ್ ವತಿಯಿಂದ ಭಕ್ತಿಗೀತೆ ಮತ್ತು ಸತ್ಸಂಗ ಕಾರ್ಯಕ್ರಮ ನಡೆಯಿತು.