ಸಂಪಾಜೆ, ಮಾ. 2: ಸಂಪಾಜೆಗೆ ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ಹೆಚ್.ಆರ್. ಹರೀಶ್ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದರು. ಕೊಯನಾಡಿನಲ್ಲಿ ಲಯನ್ಸ್ ಕ್ಲಬ್ ಸಂಪಾಜೆಯವರಿಂದ ನಿರ್ಮಿಸಲ್ಪಟ್ಟ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಟಾಟಿಸಿದರು.

ಚೆಂಬು ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ರೂಮ್‍ಗೆ ಪೆÇ್ರಜೆಕ್ಟರ್ ನೀಡಲಾಯಿತು. ಪಕ್ಷಪಾತದಿಂದ ಬಳಲುತ್ತಿರುವ ವಿಕಲಚೇತನರಿಗೆ ಗಾಲಿ ಕುರ್ಚಿ ಹಾಗೂ ಬಡ ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಷ್ಠಿತ ಕೆಒಎ-2017 ಪ್ರಶಸ್ತಿಯನ್ನು ಪಡೆದ ಕ್ರೀಡಾ ವರದಿಗಾರ ಹೇಮಂತ್ ಸಂಪಾಜೆ ಅವರನ್ನು ಗೌರವಿಸಲಾಯಿತು. ಸಂಪಾಜೆ ಕ್ಲಬ್‍ನ ಸಮಾಜಮುಖಿ ಕೆಲಸವನ್ನು ರಾಜ್ಯಪಾಲರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಅಮೃತಾ ಅಪ್ಪಣ್ಣ, ಕಾರ್ಯದರ್ಶಿ ವಾಸುದೇವ ಕಟ್ಟೆಮನೆ, ಖಜಾಂಜಿ ಲೆಸ್ಸಿ ಸಿಲ್ವೆಸ್ಟರ್, ಪ್ರಾಂತೀಯ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ, ಸದಸ್ಯರಾದ ಧನಲಕ್ಷ್ಮಿ ನವೀನ್, ವಿಮಲಾ ಗೋಪಾಲಕೃಷ್ಣ, ಸಂದ್ಯಾ ಸಚಿತ್ ರೈ, ಅಪ್ಪಣ್ಣ, ಸುಳ್ಯ, ಗುತ್ತಿಗಾರು, ಪಂಜ, ಜಾಲ್ಸೂರು, ಸಂಪಾಜೆ ಲಯನ್ಸ್ ಸದಸ್ಯರು ಮತ್ತು ರಿಕ್ಷಾ ಚಾಲಕರು ಪಾಲ್ಗೊಂಡಿದ್ದರು.