ನಾಪೆÇೀಕ್ಲು, ಮಾ. 2: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲ್ಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಭಾನುವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೆÇೀರಾಟ ಮತ್ತು ಬಲಿವಾಡುವಿನ ಆಗಮನದಿಂದ ದೇವಳದಲ್ಲಿ ಉತ್ಸವ ಆರಂಭಗೊಂಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರ ಎತ್ತು ಪೆÇೀರಾಟ ಸೇವೆಗಳೂ ಸಂಪ್ರದಾಯದಂತೆ ನಡೆಯಿತು. ನಂತರ ಭಕ್ತರ ತುಲಾಭಾರ ಸೇವೆಗಳು, ಮಧ್ಯಾಹ್ನದ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ. ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯೊಂದಿಗೆ ಐದು ಕಿ.ಮೀ. ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಭಕ್ತಾದಿಗಳು ಎತ್ತ್ತುಪೆÇೀರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿದ್ದರು. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ದೈವಿಕ ವಿಧಿವಿಧಾನಗಳು ನೈವೇಧ್ಯ, ಪೂಜೆ, ಹರಕೆ ಸೇವೆಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು. ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿಯ ನೃತ್ಯೋತ್ಸವದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.

ದೈವಿಕ ವಿಧಿವಿಧಾನಗಳನ್ನು ವೇದÀಮೂರ್ತಿಗಳಾದ ಕುಶ ಭಟ್, ಲವ ಭಟ್, ಜಗದೀಶ್ ಮತ್ತಿತರರು ನೆರವೇರಿಸಿದರು.