*ಗೋಣಿಕೊಪ್ಪಲು, ಮಾ. 2: ಶಾಸಕರ ವಿಶೇಷ ಅನುದಾನ, ನಿಧಿ ಮತ್ತು ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 49 ಲಕ್ಷ ಅನುದಾನದ ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನದ ಬೇಡಿಕೆ ಇಟ್ಟರೂ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ. ಹಿಂದೆ ಬಿ.ಜೆ.ಪಿ. ಸರ್ಕಾರ ಅಭಿವೃದ್ಧಿಪಡಿಸಿದ ರಸ್ತೆಗಳನ್ನಾದರೂ ಮರು ಡಾಂಬರೀಕರಣಕ್ಕೆ ಅನುದಾನ ನೀಡಿ ಎಂದರೂ ಸರ್ಕಾರ ಆಲಿಸುತ್ತಿಲ್ಲ. ಬಿ.ಜೆ.ಪಿ. ವಿರುದ್ಧ ಸುಳ್ಳು ಆಪಾದನೆಗಳನ್ನು ಹೇಳುತ್ತಾ ಕಾಲ ಕಳೆಯುತ್ತಿದೆ. ಶಾಸಕರ ಅನುದಾನ ಬಿಟ್ಟು ಉಳಿದಂತೆ ಜಿಲ್ಲೆಗೆ ಯಾವದೇ ವಿಶೇಷ ಅನುದಾನ ನೀಡುವಲ್ಲಿ ವಿಫಲತೆಯನ್ನು ಕಂಡುಕೊಂಡಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ಸುಳ್ಳು ಆಪಾದನೆಗಳಿಗೆ ಬಿ.ಜೆ.ಪಿ. ಕಾರ್ಯಕರ್ತರು ಕಿವಿಗೊಡದೆ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿ ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ. ಗೆಲುವು ಸಾಧಿಸಲು ಕೈಜೋಡಿಸಬೇಕು. ಯಾವದೇ ವೈಯಕ್ತಿಕ ದ್ವೇಷಗಳಿಂದ ಪಕ್ಷ ಭ್ರಷ್ಟರಾಗದೆ ಬಿ.ಜೆ.ಪಿ. ಗೆಲುವೇ ನಮ್ಮ ಗುರಿ ಎಂಬ ಮನೋಭಾವನೆ ಹೊಂದಬೇಕು ಎಂದು ಈ ಸಂದರ್ಭ ಕಾರ್ಯಕರ್ತರುಗಳಿಗೆ ಕಿವಿಮಾತು ಹೇಳಿದರು.
ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಗುಡ್ಡಮಾಡು ಕಾಲೋನಿ ರಸ್ತೆಗೆ ರೂ. 10 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಶಾಸಕ ನಿಧಿಯಿಂದ ರೂ. 1 ಲಕ್ಷ ವೆಚ್ಚದಲ್ಲಿ ಬಿ. ಶೆಟ್ಟಿಗೇರಿ ತಿರಿಕೆ ಮನೆ ರಸ್ತೆ, ಕುಟ್ಟಂದಿ ಪಣಿಕರ ಕುಟುಂಬಸ್ಥರ ರಸ್ತೆ 1 ಲಕ್ಷ, ಚಂದುರ ಗಣೇಶ್ ಕುಟುಂಬಸ್ಥರ ರಸ್ತೆ 1 ಲಕ್ಷ, ಕೊಂಗಣ ಅಯ್ಯಂಗಾಡು ರಸ್ತೆ ಡಾಂಬರೀಕರಣಕ್ಕೆ 1 ಲಕ್ಷ ಒಟ್ಟು 4 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಶಾಸಕರ ವಿಶೇಷ ಅನುದಾನದಲ್ಲಿ ಬಿ. ಶೆಟ್ಟಿಗೇರಿ, ಕೊಂಗಣ ಆಶ್ರಮ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಕುಟ್ಟಂದಿ ವಾಟರಿಬೇಲು ರಸ್ತೆ 4 ಲಕ್ಷ, ಕೆಂದರೆ ಕಾಡು ರಸ್ತೆಗೆ 5 ಲಕ್ಷ, ಕೈಮುಡಿಕೆ ರಸ್ತೆ 5 ಲಕ್ಷ, ಪೆÇನ್ನಂಪೇಟೆ ಸಂಪರ್ಕ ರಸ್ತೆಗೆ 5 ಲಕ್ಷ, ಕೊಂಗಣ ಅಯ್ಯಂಗಾಡು ರಸ್ತೆ 4 ಲಕ್ಷ, ನಾಮೇರ ಗೋಟಿ ರಸ್ತೆಗೆ 5 ಲಕ್ಷ ಮತ್ತು ಕೊಂಗಣ ತೀತಮಾಡ ಐನ್ಮನೆ ರಸ್ತೆ ಅಭಿವೃದ್ದಿಗೆ 2 ಲಕ್ಷ ಅನುಧಾನದಲ್ಲಿ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಈ ಸಂದರ್ಭ ಮಾಹಿತಿ ನೀಡಿದರು.
ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ತಾ.ಪಂ. ಸದಸ್ಯ ರಾಜು, ಆರ್.ಎಂ.ಸಿ. ಸದಸ್ಯೆ ನಾಮೇರ ಶೋಭ, ತಾಲೂಕು ಬಿ.ಜೆ.ಪಿ. ಮಂಡಳ ಪ್ರಧಾನ ಕಾರ್ಯದರ್ಶಿ ತೀತಿಮಾಡ ಲಾಲ ಭೀಮಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಡಚಂಡ ವಿಜು ಕುಶಾಲಪ್ಪ, ಕಾರ್ಯದರ್ಶಿ ಕರ್ತುರ ಪ್ರಕಾಶ್, ಪ್ರಮುಖರಾದ ನಾಣಯ್ಯ, ಸುಬ್ಬಯ್ಯ, ನವೀನ್, ವಾಸು ನಂಜಪ್ಪ, ಫೆಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಮತ್ತು ಶಾಸಕರ ಆಪ್ತ ಸಹಾಯಕ ನರಸಿಂಹ ಉಪಸ್ಥಿತರಿದ್ದರು.