ಮಡಿಕೇರಿ, ಮಾ. 2: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಹಿರಿಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕ ಪಟ್ರಪಂಡ ಸೋಮೇಶ್ ಚಂಗಪ್ಪ ಅವರು ಉತ್ತಮ ಸಾಧನೆ ತೋರಿ ಪ್ರಶಸ್ತಿ ಗಳಿಸಿದ್ದಾರೆ. 4*400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ 200 ಮೀಟರ್ ಓಟದಲ್ಲಿ 2ನೇ ಸ್ಥಾನ ಗಳಿಸಿ ಇವರು ಸಾಧನೆಗೈದಿರುವದಾಗಿ ಪಟ್ರಪಂಡ ಕುಟುಂಬದ ಪ್ರಮುಖರು ಮಾಹಿತಿ ನೀಡಿದ್ದಾರೆ.