ಸೋಮವಾರಪೇಟೆ, ಮಾ. 2: ತಾಲೂಕು ಪಂಚಾಯಿತಿಯ ವಿಶೇಷ ಘಟಕ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಮೀನುಗಾರಿಕಾ ಇಲಾಖೆ ಮೂಲಕ ಮೀನು ಹಿಡಿಯುವ ಸಲಕರಣೆಗಳನ್ನು ವಿತರಿಸಲಾಯಿತು.

ತಾಲೂಕಿನ 20 ಮಂದಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಯೋಜನೆಯಡಿ ಕ್ರೇಟ್, ಬಲೆ, ಹೆಡ್ ರೋಪ್, ಫೂಟ್ ರೋಪ್, ಫ್ಲೋಟರ್, ಸಿಂಕರ್ಸ್‍ಗಳನ್ನು ನೀಡಲಾಗುವದು ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾಹಿತಿ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯರುಗಳಾದ ಕುಸುಮಾ ಅಶ್ವಥ್, ಎನ್.ಎಸ್. ಜಯಣ್ಣ ಅವರುಗಳು ಚಿಕ್ಕ ಅಳುವಾರ ಗ್ರಾಮದ ಹರೀಶ್, ಶುಂಠಿ ಗ್ರಾಮದ ನಾಗರಾಜ ಅವರುಗಳಿಗೆ ಸಾಂಕೇತಿಕವಾಗಿ ಸಲಕರಣೆಗಳನ್ನು ವಿತರಿಸಿದರು.