ಗುಡ್ಡೆಹೊಸೂರು, ಮಾ. 2: ಆನೆಕಾಡಿನಿಂದ ಗುಡ್ಡೆಹೊಸೂರಿನ ತನಕ ಪರಿಸರ ಉಳಿಸಿ ಜಾಥಾವನ್ನು ಏರ್ಪಡಿಸಲಾಗಿತ್ತು. ಅಂತರ್ಜಲದ ಅಭಿವೃದ್ಧಿ, ಶುದ್ಧ ಗಾಳಿಗಾಗಿ, ವಾಯುಮಾಲಿನ್ಯ ತಡೆಗಟ್ಟಲು, ಕಾಡು ಪ್ರಾಣಿಗಳ ಉಳಿವಿಗಾಗಿ, ಆನೆ ಮತ್ತು ಮಾನವ ಸಂಘರ್ಷ, ಅರಣ್ಯ ಕಾಡ್ಗಿಚ್ಚು ತಪ್ಪಿಸಲು ಜನರಲ್ಲಿ ಜಾಗೃತಿ ಮೂಡಿಸಲು ಜಾಥಾವನ್ನು ಏರ್ಪಡಿಸಲಾಗಿತ್ತು.

ಜಾಥಾದ ನೇತೃತ್ವವನ್ನು ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ರಾಜ್‍ರಾವ್ ವಹಿಸಿದ್ದರು. ಆದಿವಾಸಿ ಬಂಧುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯೆ ಸುಲೋಚನ, ಲ್ಯಾಂಪ್ಸ್ ಸೊಸೈಟಿ ನಿರ್ದೇಶಕರಾದ ಆರ್.ಕೆ. ಚಂದ್ರ, ಬಿ.ಕೆ. ಮೋಹನ್, ಗ್ರಾ.ಪಂ. ಸದಸ್ಯರಾದ ಕವಿತ ರಾಜಪ್ಪ, ಡಾಟಿ ಉಮೇಶ್ ಮುಂತಾದವರು ಭಾಗವಹಿಸಿದ್ದರು. ಅರಣ್ಯ ಇಲಾಖಾ ಸಿಬ್ಬಂದಿಗಳಾದ ಗಣೇಶ್, ತಿಮ್ಮಯ್ಯ, ಮತ್ತು ಮಂಜೇಗೌಡ ಮುಂತಾದವರು ಭಾಗವಹಿಸಿದ್ದರು.