ವೀರಾಜಪೇಟೆ, ಮಾ. 3: ಬಾಲಕಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಲೂರು ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ನಗರದ ಗಣಪತಿ ಬೀದಿ ನಿವಾಸಿ, ಕುಕ್ಲೂರಿನಲ್ಲಿ ವಾಸವಿದ್ದ ಪಿ.ವೈ. ಕಿಸೂ ಮತ್ತು ಗೌರಿ ದಂಪತಿಗಳ ಪುತ್ರಿ ಪಿ.ಕೆ. ರೂಪಾ (17) ನೇಣಿಗೆ ಶರಣಾದ ಬಾಲಕಿ. ಕಿಸೂ ಕೂಲಿ ಕಾರ್ಮಿಕನಾಗಿದ್ದು, ಇತ್ತೀಚೆಗೆ ಹೆಂಡತಿ ಸಂಸಾರದಿಂದ ಬೇರೆಯಾಗಿದ್ದಳು.

ಇಂದು ಎಂದಿನಂತೆ ರೂಪಳ ಅಣ್ಣ ಚಾಲಕ ವೃತ್ತಿಗೆ ಹಾಗೂ ತಂಗಿ ಅಕ್ಷತಾ ಶಾಲೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ಕಬ್ಬಿಣದ ಸಲಾಕೆಗೆ ಹಗ್ಗ ಬಿಗಿದು ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.