ಮಡಿಕೇರಿ, ಮಾ. 2: ಪ್ರವಾಸೋದ್ಯಮ ಇಲಾಖೆ ವತಿಯಿಂದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆಬ್ರವರಿ 28 ರೊಳಗೆ 12x18 ಅಳತೆಯ ಗರಿಷ್ಠ 4 ಚಿತ್ರಗಳನ್ನು ಕಳುಹಿಸಬಹುದು ಎಂದು ತಿಳಿಸಲಾಗಿತ್ತು. ಆದರೆ ಕಾಲಾವಕಾಶವನ್ನು ತಾ. 7 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಹೋಟೆಲ್ ಮಯೂರ ವ್ಯಾಲಿವ್ಯೂ ಹತ್ತಿರ ಮಡಿಕೇರಿ ಅಥವಾ 08272-228580 (ಚಿಜಞoಜಚಿguಣouಡಿism@gmಚಿiಟ.ಛಿom) ಸಂಪರ್ಕಿಸಬಹುದು.