ಮಡಿಕೇರಿ, ಮಾ. 2: ಎಸ್.ಕೆ.ಎಸ್.ಎಸ್.ಎಫ್. ಮಹಾ ಸಭೆಯನ್ನು ಇತ್ತೀಚೆಗೆ ಸಿದ್ದಾಪುರದ ವರಕ್ಕಲ್ ಸ್ಮಾರಕ ಭವನದಲ್ಲಿ ನಡೆಸಲಾಯಿತು. ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಎಂ.ಎಂ. ಅಬ್ದುಲ್ಲ ಫೈಝಿ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಲೀಖ್ ಧಾರಿಮಿ ಸ್ವಾಗತಿಸಿ ವರದಿ ಮಂಡಿಸಿದರು. ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸಿದರು.
ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಪಿ.ಬಿ. ಇಸ್ಮಾಯಿಲ್ ಮುಸ್ಲಿಯಾರ್ ಹಾಗೂ ಕೊಡಗು ಜಿಲ್ಲಾ ಮದ್ರಸಾ ಆಡಳಿತ ಅಧ್ಯಕ್ಷ ಉಸ್ಮಾನ್ ಹಾಜಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘಟನೆಯ ಚಲನವಲನಗಳ ಹಾಗೂ ಕರ್ಮಪದ್ಧತಿಗಳ ಬಗ್ಗೆ ಎಸ್.ಕೆ.ಎಸ್.ಎಸ್.ಎಫ್. ರಾಜ್ಯ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ವಿವರಿಸಿದರು.
ಎಸ್.ಕೆ.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿಯ 2018-20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನೌಷಾದ್ ಫೈಝಿ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮಿಸ್ಬಾಹಿ, ಕೋಶಾಧಿಕಾರಿಯಾಗಿ ಜಿ.ಎಂ. ಅಬುಬಕರ್ ಸಿದ್ದೀಖ್, ಸಂಘಟನಾ ಕಾರ್ಯದರ್ಶಿಯಾಗಿ ಶುಹೈಬ್ ಫೈಝಿ ಎಂಬವರನ್ನು ಆಯ್ಕೆ ಮಾಡಲಾಯಿತು.
ಜಂಟಿ ಕಾರ್ಯದರ್ಶಿಗಳಾಗಿ ಸಾಜಿರ್, ಇರ್ಷಾದ್, ಸಮೀರ್ ಹಾಗೂ ಹಿರಿಯ ಉಪಾಧ್ಯಕ್ಷರುಗಳಾಗಿ ತಮ್ಲೀಖ್ ಧಾರಿಮಿ, ಆರಿಫ್ ಫೈಝಿ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಮಜೀದ್, ರಫೀಕ್ ಬಾಖವಿ, ಹನೀಫ್ ಫೈಝಿ, ರಶೀದ್ ಧಾರಿಮಿ, ಸಂಘಟಕರಾಗಿ ಉನೈಸ್ ಫೈಝಿ, ಹಸೈನಾರ್ ಫೈಝಿ, ಎ.ಸಿ. ಹಾರಿಸ್ ನೇಮಕಗೊಂಡರು. ಸಮಿತಿ ಸದಸ್ಯರುಗಳಾಗಿ ಹತ್ತು ಮಂದಿ ಹಾಗೂ ರಾಜ್ಯ ಪ್ರತಿನಿಧಿಗಳಾಗಿ ಇತರರನ್ನು ಆರಿಸಲಾಯಿತು.