ಮಡಿಕೇರಿ, ಫೆ. 28: ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ ಹಾಗೂ ಅಂಭಾ ಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ಕಿಡ್ನಿ ವೈಫಲ್ಯ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಕಮಲ ಎಂಬವರಿಗೆ ರೂ. 34,600 ಸಹಾಯಧನ ನೀಡಲಾಯಿತು.
ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದ ಕಲ್ಲಾಳ್ಳ ನಿವಾಸಿ ಕಮಲ (52) ಎಂಬವರು ಕಳೆದ ಎರಡು ವರ್ಷದಿಂದ ಕಿಡ್ನಿ ವೈಫಲ್ಯ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಸಂಘದ ವತಿಯಿಂದ ಹಾಗೂ ಸಂಘದ ಸದಸ್ಯರಿಂದ ಹಣ ಸಂಗ್ರಹಿಸಿ ಚೆಕ್ನ್ನು ಕಮಲರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್, ಕಾರ್ಯದರ್ಶಿ ಎಂ.ಟಿ. ಪವನ್ ಕುಮಾರ್, ಸಂಘದ ಕಟ್ಟಡ ಸಮಿತಿ ಸದಸ್ಯ ಎಂ.ಎಸ್. ಯೋಗೇಂದ್ರ, ಪ್ರಮುಖರಾದ ದೇವಪ್ಪ, ಹರೀಶ್, ಕಾಂತಿ, ಕುಂಙಣ್ಣ ಸೇರಿದಂತೆ ಇತರರು ಇದ್ದರು.