ಕುಡಿಯುವ ನೀರಿನ ಯಂತ್ರ ಕೊಡುಗೆ

ಸುಂಟಿಕೊಪ್ಪ: ಕಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ವೀರ ಶೈವ ಯುವ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಅವರು ಸುಮಾರು ರೂ. 17 ಸಾವಿರ ಮೊತ್ತದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಉಚಿತವಾಗಿ ಶಾಲೆಯ ಮುಖ್ಯೋಪಾಧ್ಯಾಯ ಶಶಿಕುಮಾರ್ ಅವರಿಗೆ ನೀಡಿದರು.

ಪ್ರಶಾಂತ್ ಅವರು ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಊರಿನ ಹಾಗೂ ಶಾಲೆ ಮೇಲೆ ಅಭಿಮಾನವಿಟ್ಟು ಕೊಡುಗೆ ನೀಡಿದಕ್ಕೆ ಮುಖ್ಯ ಶಿಕ್ಷಕರು ಇವರ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ಶಾಲಾ ಎಸ್‍ಡಿಎಂಸಿ. ಅಧ್ಯಕ್ಷ ರವಿ ಪೂಜಾರಿ, ನಿವೃತ್ತ ಯೋಧ ಶಶಿ, ಶಾಲಾ ಶಿಕ್ಷಕಿ ಡೆಲ್ಫಿನಾ ಫೆರ್ನಾಂಡಿಸ್, ಕಾಫಿ ಬೆಳೆಗಾರ ಸುರೇಶ್ ಕೆರೆಮನೆ ಹಾಜರಿದ್ದರು.