ಸೋಮವಾರಪೇಟೆ, ಫೆ. 28: ಸಮೀಪದ ತಣ್ಣೀರುಹಳ್ಳ ಗ್ರಾಮದ ಬಸವೇಶ್ವರ ಯುವಕ ಸಂಘದ 45ನೇ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಅಂಗವಾಗಿ ತಾ. 18 ರಂದು ತಣ್ಣೀರುಹಳ್ಳದಲ್ಲಿ ಪ್ರಥಮ ವರ್ಷದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಕೆ. ಕಿಶೋರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಾ. 18 ರಂದು ಸಂಜೆ 3 ಗಂಟೆಗೆ ತಣ್ಣೀರುಹಳ್ಳ ಶಾಲಾ ಮೈದಾನದಲ್ಲಿ ಪಂದ್ಯಾಟಗಳು ಪ್ರಾರಂಭವಾಗಲಿದ್ದು, ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಅಪ್ಪಚ್ಚು ರಂಜನ್, ನೇರುಗಳಲೆ ಗ್ರಾಪಂ. ಅಧ್ಯಕ್ಷ ತಿಮ್ಮಯ್ಯ, ಮಾಜಿ ಸಚಿವ ಬಿ.ಎ. ಜೀವಿಜಯ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ನಾಪಂಡ ಮುತ್ತಪ್ಪ, ಗಿರೀಶ್ ಮಲ್ಲಪ್ಪ, ಕೊತ್ನಳ್ಳಿ ಅರುಣ್, ಮಲ್ಲೇಶ್ ಗೌಡ, ಕೆದಂಬಾಡಿ ಮಧುಶಂಕರ್, ವಿ.ಎಂ. ವಿಜಯ, ಎಸ್.ಎಂ. ಡಿಸಿಲ್ವಾ, ನಂಗಾರು ಹೇಮಂತ್, ಸುಭಾಷ್ ತಿಮ್ಮಯ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ರೂ. 20 ಸಾವಿರ, ತೃತೀಯ ರೂ. 10 ಸಾವಿರ ನಗದು ಹಾಗೂ ಟ್ರೋಫಿಗಳನ್ನು ನೀಡಲಾಗುವದು. ಭಾಗವಹಿಸುವ ತಂಡಗಳು ತಾ. 18 ರ ಮಧ್ಯಾಹ್ನ 12.30 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9449828219, 9483262987 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಬಿ. ಶಾಂತರಾಜು, ಪ್ರಧಾನ ಕಾರ್ಯದರ್ಶಿ ಟಿ.ಆರ್. ಪ್ರವೀಣ್, ಖಜಾಂಚಿ ಟಿ.ಕೆ. ಗಗನ್, ಪದಾಧಿಕಾರಿ ಬಿ.ಜಿ. ರವಿ ಉಪಸ್ಥಿತರಿದ್ದರು.