ಮಡಿಕೇರಿ, ಫೆ. 28: ಪೆರಾಜೆಯಲ್ಲಿ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡರ ಯುವಸೇವಾ ಸಂಘದ ವತಿಯಿಂದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮುದಿಯಾರು, ಪೀಚೆ, ಪಡ್ಡಂಬೈಲು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆÉ.
ಇಂದು ನಡೆದ ಪಂದ್ಯಾಟದಲ್ಲಿ ಪಡ್ಡಂಬೈಲು ತಂಡ ಕಡಪಳ ತಂಡ ವನ್ನು ಸೋಲಿಸಿತು, ಮುದಿಯಾರು ತಂಡ ಕುಂದಲ್ಪಾಡಿ ತಂಡವನ್ನು ಸೋಲಿಸಿತು. ಕುಂಬಳಚೇರಿ ತಂಡ ನೂಜಿಬೈಲು ತಂಡವನ್ನು ಸೋಲಿಸಿತು, ತಳೂರು ತಂಡವನ್ನು ಮುದಿಯಾರು ಮಣಿಸಿತು, ನಂಗಾರು ತಂಡವನ್ನು ಪಡ್ಡಂಬೈಲು ಸೋಲಿಸಿತು. ಕುಂಬಳಚೇರಿ ತಂಡವನ್ನು ಪೀಚೆ ತಂಡ ಮಣಿಸಿತು. ಚೆಮ್ನೂರು ತಂಡವನ್ನು ಪಡ್ಡಂಬೈಲು ತಂಡ ಸೋಲಿಸಿತು.
ತಾ. 1 ರಂದು (ಇಂದು) ಪೊದ್ದೆಟ್ಟಿ, ಪಡುಮಜಲು, ಬಂಗಾರಕೋಡಿ, ಪಾಣತ್ತಿಲ (ಬಿ), ಪಾಲಾರ್, ಪಿಂಡಿಮನೆ, ಕಕ್ಕೆಚಾಲು, ಕಲ್ಲುಮುಟ್ಲು, ಕೊಯಿಂಗಾಜೆ, ಮೇಲ್ಚೆಂಬು, ಕುಂಚಡ್ಕ, ನಾರ್ಕೋಡು ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ.