ವೀರಾಜಪೇಟೆ: ವಿಶ್ವ ದಂತಶಿಕ್ಷಣ ಸಂಘದ ಸಹಯೋಗದೊಂದಿಗೆ ಕೊಡಗು ದಂತ ಮಹಾವಿದ್ಯಾಲಯ, ವೀರಾಜಪೇಟೆ ಇವರ ಆಶ್ರಯದಲ್ಲಿ ದ್ವಿತೀಯ ವಾರ್ಷಿಕ ದಂತ ಪದವೀಧರರ ಕಾರ್ಯಕ್ರಮವನ್ನು ಫೆ. 27 ಹಾಗೂ 28 ರಂದು ಕೊಡಗು ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಪ್ರೊ. ಸಥೋಷಿ ನಾಗಸಕ, ಸದಸ್ಯರು, ನಿರ್ದೆಶಕರ ಮಂಡಳಿ, ಜಪಾನ್ ಅಸೋಸಿಯೇಶನ್ ಯು.ಎನ್.ಹೆಚ್.ಸಿ.ಆರ್ ಹಾಗೂ ಫ್ರೊಫೆಸರ್ ಆರ್ತೊಡಾನ್ಟಿಕ್ಸ್, ಸುರುಮಿ ಯುನಿವರ್ಸಿಟಿ, ಜಪಾನ್ ಇವರುಗಳು ಉದ್ಘಾಟಿಸಿದರು.

ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುನೀಲ್ ಮುದ್ದಯ್ಯ ಪ್ರಾಸ್ತಾವಿಕ ಭಾಷಣದಲ್ಲಿ ಪ್ರಪಂಚದÀ ಸಂಶೋಧನೆಯಲ್ಲಿ ಭಾರತದ ಪಾಲು ತೀರಾ ಹತಾಶದಾಯಕ. ಭಾರತ ದೇಶವು ಅತಿ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿದ್ದರೂ ಸಂಶೋಧನೆಯಲ್ಲಿ ನಿರಾಶದಾಯಕ ಪಾಲನ್ನು ಹೊಂದಿದೆ. ಈ ಹಿನ್ನೆಲೆ ಕೊಡಗು ದಂತ ಮಹಾವಿದ್ಯಾಲಯ ವಾರ್ಷಿಕ ದಂತ ಪದವೀಧರರ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ ಎಂದರು. ಈ ವರ್ಷದ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವದಾದ್ಯಂತ ವಿದ್ಯಾಸಂಸ್ಥೆಗಳಿಂದ ಬಂದು ತಮ್ಮ ಸಂಶೋಧನೆಗಳನ್ನು ಪ್ರದರ್ಶಿಸಿದರು.

ದಂತ ಶಿಕ್ಷಕರು ತಮ್ಮ ದಂತ ವೈದ್ಯ ಶಾಸ್ತ್ರದಲ್ಲಿನ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ತಿಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸುವ ಬಗ್ಗೆ ಒತ್ತು ನೀಡುತ್ತಿರುವದಾಗಿ ತಿಳಿಸಿದ ಅವರು, ಸಂಸ್ಥೆಯ ಸಹಾಯದಿಂದ ವಿದ್ಯಾರ್ಥಿ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ವೈಜ್ಞಾನಿಕ ಸಾಹಿತ್ಯದ ಪ್ರಕಟಣೆಗಳನ್ನು ಉತ್ತೇಜಿಸಲು ಹಾಗೂ ದಂತ ಚಿಕಿತ್ಸಾ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ಶಿಕ್ಷಕ ತರಬೇತಿ ಕಾರ್ಯಕ್ರಮಗಳು ಮತ್ತು ತರಬೇತಿಗಳನ್ನು ಹಮ್ಮಿಕೊಳ್ಳಲು ಎಲ್ಲಾ ಶಿಕ್ಷಕರಿಗೆ ಹೇಳಿದರು.

ಪ್ರೊ. ಸಥೋಷಿ ನಾಗಸಕ ತಮ್ಮ ಬಾಷಣದಲ್ಲಿ ಇಂತಹ ಅಂತರ್ರಾಷ್ಟ್ರಿಯ ಮಟ್ಟದ ವಿಚಾರಗೋಷ್ಠಿಯನ್ನು ಪ್ರಾರಂಭಿಸಿದ ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುನೀಲ್ ಮುದ್ದಯ್ಯ ಅವರನ್ನು ಪ್ರಶಂಶಿಸಿ ಇಂತಹ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.

ಡಾ. ಕೆ.ಸಿ. ಪೆÇನ್ನಪ್ಪ ಪ್ರಾಂಶುಪಾಲರು, ಡಾ. ಜಿತೇಶ್ ಜೈನ್ ಉಪ ಪ್ರಾಂಶುಪಾಲರು, ಕೊಡಗು ದಂತ ವೈದ್ಯಕೀಯ ಕಾಲೇಜು, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರಿಂಘ ಅಮೃಥೇಶ್ವರಿ ಮತ್ತು ಕಾರ್ಯದರ್ಶಿ ಪ್ರಾರ್ಥನಾ ಸುದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿ ಉಪನ್ಯಾಸಕರು ಸಂಶೋಧನೆಯಲ್ಲಿನ ಮೂಲಭೂತ ಸೌಕರ್ಯಗಳು ಹಾಗೂ ಉಪಯೋಗಗಳ ಬಗ್ಗೆ ಇಲ್ಲಿ ನೆರೆದ ಪದವೀದರರಿಗೆ ಮನವರಿಕೆ ಮಾಡಿ ಕೊಟ್ಟರು.

ಕಾರ್ಯಕ್ರಮದ ನಂತರ ನಿದ್ರಾ (ನಿದ್ರಾವಸ್ಥೆಯ ಉಸಿರಾಟ ಅಸ್ವಸ್ಥತೆ ನಿರ್ಮೂಲನಾ ಕೇಂದ್ರ)ವನ್ನು ಅತಿಥಿಗಳಾದ ಏರ್ ಕಮಾಂಡರ್ ಬಾಲಕೃಷ್ಣನ್ ಜಯನ್ - ಏರ್‍ಫೆÇೀರ್ಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಬೆಂಗಳೂರು ಇವರು ಉದ್ಘಾಟಿಸಿದರು.