*ಗೋಣಿಕೊಪ್ಪಲು, ಫೆ. 28: ಆರೋಗ್ಯ ಪೂರ್ಣ ಜೀವನ ನಡೆಸಲು ನಿತ್ಯ ಒಂದು ಗಂಟೆಗಳ ಕಾಲ ವಾದರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಶಾಸಕ. ಕೆ.ಜಿ ಬೋಪಯ್ಯ ಹೇಳಿದರು.
ಪೆÇನ್ನಂಪೇಟೆ ಶಾಸಕರ ಕಚೇರಿ ಯಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸಂಘಟನೆಗಳಿಗೆ ನೀಡುವ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನಸ್ಸು ಹಾಗೂ ದೇಹ ಆರೋಗ್ಯ ಪೂರ್ಣವಾಗಿರಲು ಕ್ರೀಡೆ ಯಿಂದ ಸಾಧ್ಯ ಯುವ ಸಮುದಾಯ ಕ್ರೀಡಾ ಚಟುವಟಿಕೆಗಳತ್ತ ಹೆಚ್ಚಿನ ಒಲವು ತೋರಬೇಕಾಗಿದೆ. ಇಂದಿನ ಯುವ ಸಮುದಾಯ ಮೊಬೈಲ್ ಗಳಲ್ಲಿಯೇ ಹಲವು ಕ್ರೀಡೆಗಳನ್ನು ಆಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗದೆ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು. ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳಿಗೆ ಈ ಸಂದರ್ಭ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಸುರೇಶ್ ರೈ, ಪೆÇನ್ನಂಪೇಟೆ ಗ್ರಾ.ಪಂ. ಸದಸ್ಯರುಗಳಾದ ಅಮ್ಮತ್ತಿರ ಸುರೇಶ್, ಜಯಲಕ್ಷ್ಮಿ, ಹೊಸೂರು ಗ್ರಾ.ಪಂ. ಸದಸ್ಯ ನರಸಿಂಹ, ತಾಲೂಕು ಫೆಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಅರುವತ್ತೊಕ್ಲು ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಮನೆಯಪಂಡ ಸೋಮಣ್ಣ, ಕಾರ್ಯದರ್ಶಿ ವಿಕ್ರಂ, ಯುವಜನ ಕ್ರೀಡಾ ಇಲಾಖೆ ನಿರ್ದೇಶಕಿ ಜಯಲಕ್ಷ್ಮಿಬಾಯಿ ಸೇರಿದಂತೆ ಫಲಾನುಭವಿ ಸಂಘಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.