ಮಡಿಕೇರಿ, ಮಾ. 1: ತಾ. 8 ರಂದು ನಡೆಯುವ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಮಹಿಳೆಯರಿಗೆ ಕ್ರೀಡಾಕೂಟ ಸ್ಪರ್ಧೆ ತಾ. 3 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 100 ಮೀಟರ್ ಓಟ, ವೇಗದ ನಡಿಗೆ, ಮ್ಯೂಸಿಕಲ್ ಚೇರ್, ಶಾಟ್ಪುಟ್, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದೆ.
ಪೌಷ್ಟಿಕ ಆಹಾರ ತಯಾರಿಕೆ ಬಗ್ಗೆ ಅಡುಗೆ ಸ್ಪರ್ಧೆ ಮತ್ತು ಮಹಿಳಾ ಕವಿಗೋಷ್ಠಿಯು ತಾ. 6 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎಫ್ಎಂಕೆಎಂಸಿ ಕಾಲೇಜು ಹಿಂಭಾಗದ ಸ್ತ್ರೀಶಕ್ತಿ ಭವನದಲ್ಲಿ ಜರುಗಲಿದೆ. ಜೊತೆಗೆ ಪೌಷ್ಟಿಕ ತಜ್ಞರಿಂದ ಪ್ರಾತ್ಯಕ್ಷತೆ ಹಾಗೂ ಉಪನ್ಯಾಸ ಹಾಗೂ ಮಹಿಳಾ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳೆಯರು 18 ವರ್ಷ ಮೇಲ್ಪಟ್ಟವರಾಗಿದ್ದು, ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಚೈನ್ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಅಥವಾ 08272-228010, 9482194105 ಸಂಪರ್ಕಿಸಬಹುದು.