ನಾಪೆÉÇೀಕ್ಲು, ಫೆ. 27: ವಿಶ್ವದಲ್ಲಿರುವ ಎಲ್ಲಾ ಧರ್ಮಗಳೂ ಶಾಂತಿಯನ್ನು ಸಾರುತ್ತಿದೆ. ಎಲ್ಲರೂ ಅವರವರ ಧರ್ಮಕ್ಕೆ ಅನುಗುಣವಾಗಿ ಜೀವನ ಸಾಗಿಸಿದರೆ ಸಮಾಜದಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಅಭಿಪ್ರಾಯಪಟ್ಟರು.

ಸಮೀಪದ ಚೆರಿಯಪರಂಬು ಮುಸ್ಲಿಂ ಜಮಾಅತ್ ವತಿಯಿಂದ ನಡೆದ ವಾರ್ಷಿಕ ಉರೂಸ್‍ನ ಸರ್ವಧರ್ಮ ಸಮೇಳನದಲ್ಲಿ ಅವರು ಮಾತನಾಡಿದರು. ಉರೂಸ್ ಕಾರ್ಯಕ್ರಮಗಳು ತಮ್ಮ ಧರ್ಮದ ಪವಾಡ ಪುರುಷರನ್ನು ನೆನಪಿಸು ವಂತಹ ಮಹಾತ್ಕಾರ್ಯವಾಗಿದೆ ಎಂದರು. ಎಲ್ಲಾ ಧರ್ಮಗಳೂ ಶಾಂತಿ ಸೌಹಾದರ್Àತೆಯನ್ನು ಸಾರಿವೆ. ಅದನ್ನು ಅರಿತು ತಮ್ಮ, ತಮ್ಮ ಧರ್ಮದ ಆರಾಧನೆಯೊಂದಿಗೆ ಪರಸ್ಪರ ಪ್ರೀತಿ, ಸ್ನೇಹದೊಂದಿಗೆ ನಾವೆಲ್ಲಾ ಒಂದು ಎಂಬ ಮನೋಭಾವನೆಯಿಂದ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್ ಅಬ್ದುಲ್ ರೆಹಮಾನ್ ಮಾತನಾಡಿ ಹಿಂದಿನ ಕಾಲದಲ್ಲಿ ಭಗವಂತನ ಧ್ಯಾನದೊಂದಿಗೆ ಸಂತರು, ಧರ್ಮ ಗುರುಗಳು ಧರ್ಮ ಪ್ರಚಾರ ಮಾಡಿರುವದರಿಂದ ಇಂದು ಧರ್ಮ ಉಳಿದುಕೊಂಡಿದೆ ಎಂದರು.

ಸಿ.ಪಿ.ಎಂ. ಬಸೀರ್ ಹಾಜಿ ಮಾತನಾಡಿದರು. ಉಸ್ತಾದ್ ಅಬೂ ಸುಫ್‍ಯಾನ್ ಇಬ್ರಾಹಿಂ ಮದನಿ ಕಾಟಿಪಳ್ಯ ಇವರು ಇಸ್ಲಾಂ ಬಗ್ಗೆ ಪ್ರವಚನ ನೀಡಿದರು.

ಉದ್ಘಾಟನೆಯನ್ನು ಉಸ್ತಾದ್ ಅಲ್‍ಅಜ್ ಕೆ.ಎ. ಮಹಮ್ಮದ್ ಮುಸ್ಲಿಯಾರ್ ನೆರವೇರಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಬಿ.ಎಂ. ಬಶೀರ್ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ ಅದಪೊಳೆ ಮಹಮ್ಮದ್ ಹಾಜಿ, ಎಂ.ಹೆಚ್ ಇಬ್ರಾಹಿಂ ನಾಪೆÉÇೀಕ್ಲು ಜಮಾಅತ್ ಅಧ್ಯಕ್ಷ, ನಿಜಾಮುದ್ದೀನ್ ಕಲ್ಲುಮೊಟ್ಟೆ ಜಮಾಅತ್ ಅಧ್ಯಕ್ಷ, ಕೆ.ಎ. ಹ್ಯಾರಿಸ್, ಪಿ.ಎ. ಹಮೀದ್. ಎಂ.ಎಸ್. ಮಹಮ್ಮದ್ ಆಲಿ, ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ರಷೀದ್, ಎಂ.ಎ. ಮನ್ಸೂರ್ ಆಲಿ, ಪಿ.ಪಿ. ಮೊಯಿದ್ದೀನ್ ಕುಂಞ ಹಾಜಿ, ಪಿ.ಎಂ. ಹಸೈನಾರ್ ಹಾಜಿ, ಹೆಚ್.ಎ. ಹಂಸ. ಕೆ.ಎ. ಯೂಸೂಫ್ ಹಾಜಿ. ಕೆ.ಎ. ಅಬ್ದುಲ್ ಖಾದರ್ ಮುಸ್ಲಿಯಾರ್, ಸಿ.ಎಂ. ಉಸ್ಮಾನ್, ಪಿ.ಎಂ. ಅಹಮ್ಮದ್ ಇದ್ದರು.