ಸೋಮವಾರಪೇಟೆ, ಫೆ. 26: ಕರ್ನಾಟಕ ರಾಜ್ಯದ ಬೀಚ್ ಕಬಡ್ಡಿ ತಂಡದಲ್ಲಿ ತಾಲೂಕಿನ ಕೂತಿ ಗ್ರಾಮದ ಕೆ. ಎ. ರತನ್ ಸ್ಥಾನ ಪಡೆದಿದ್ದಾರೆ. ಆಂಧ್ರ ಪ್ರದೇಶದ ರಾಜ್ಯ ಕಬಡ್ಡಿ ಅಸೋಸಿಯೇಶನ್, ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಆಶ್ರಯದಲ್ಲಿ ತಾ. 25 ರಿಂದ 28ರವರೆಗೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪೆದವದಲಪುಡಿ ಯಲ್ಲಿ ನಡೆಯುವ 10ನೇ ರಾಷ್ಟ್ರೀಯ ಬೀಚ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಪಾಲ್ಗೊಂಡಿದ್ದು, ಇದರಲ್ಲಿ ರತನ್ ಸ್ಥಾನ ಪಡೆದಿದ್ದಾನೆ. ಈಗಾಗಲೇ ಹಲವು ಕಬಡ್ಡಿ ಪಂದ್ಯಾವಳಿಯಲ್ಲಿ ಆಟವಾಡಿ ಅನುಭವ ಗಳಿಸಿರುವ ರತನ್, ಮಂಗಳೂರು ವಿಶ್ವವಿದ್ಯಾಲಯ, ಸೆಂಟ್ರಲ್ ಎಕ್ಸೈಸ್ ತಂಡಗಳನ್ನು ಪ್ರತಿನಿಧಿಸಿದ್ದು, ಸೋ.ಪೇಟೆ ಸಮೀಪದ ಕೂತಿ ಗ್ರಾಮದ ಯು. ಎಂ. ಅಪ್ಪಚ್ಚು, ಇಂದಿರಾ ದಂಪತಿ ಪುತ್ರ.