ಮಡಿಕೇರಿ, ಫೆ. 25: ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ನಗರದ ಗಾಂಧಿಮಂಟಪ ಬಳಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಧರಣಿಯನ್ನು ಹೆಬ್ಬಾಲೆ ಭದ್ರಗೋಳ ಪೈಸಾರಿ ನಿವಾಸಿಗಳು ಮುಂದುವರಿಸಿ ದ್ದಾರೆ. ತಮ್ಮ ಬೇಡಿಕೆಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಬೆಳಕು ಮತ್ತು ವಸತಿ ಸೌಲಭ್ಯ ದೊರಕುವ ತನಕ ಹೋರಾಟ ಮುಂದುವರಿಸು ವದಾಗಿ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.

ಈ ನಡುವೆ ಹೆಬ್ಬಾಲೆ ಭದ್ರಗೋಳ ಶ್ರೀ ಅಯ್ಯಪ್ಪ ಭದ್ರಕಾಳಿ ದೇವಾಲಯ ಆಡಳಿತ ಮಂಡಳಿಯು ದಶಕದ ಹಿಂದೆ ಸಂಬಂಧಿಸಿದ ಜಾಗದಲ್ಲಿ ವಸತಿ ಹೊಂದಿರುವವರನ್ನು ತೆರವು ಗೊಳಿಸುವಂತೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸದಂತೆ ನ್ಯಾಯಾಲಯ ದಲ್ಲಿ ಮೊಕದ್ದಮೆ ಹೂಡಿರುವ ಕಾರಣ, ಸರಕಾರಿ ಸೌಲಭ್ಯ ಒದಗಿಸಲು ಅಸಾಧ್ಯವೆಂದು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಮೂರು ದಿನಗಳಿಂದ ಮುಷ್ಕರ ನಿರತ ಹಾಡಿವಾಸಿಗಳಿಗೆ ನ್ಯಾಯ ಕಲ್ಪಿಸುವ ದಿಸೆಯಲ್ಲಿ ಸಂಬಂಧಿಸಿದವರು ಸೌಹಾರ್ದಯುತ ಪರಿಹಾರಕ್ಕೆ ಮುಂದಾಗಬೇಕಿದೆ.