ನಾಪೋಕ್ಲು, ಫೆ. 25: ಸಹಕಾರಿ ಕ್ಷೇತ್ರದಲ್ಲಿ ರೈತರ ಧ್ವನಿ ಗಟ್ಟಿಯಾದಾಗ ಮಾತ್ರ ಸರಕಾರದ ಹಲವು ಸೌಲಭ್ಯಗಳು ರೈತರನ್ನು ತಲುಪಲು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಮತ್ತು ಸಹಕಾರ ಭವನದ ಕಟ್ಟಡ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಸಂಘದ ಗೋದಾಮುಗಳನ್ನು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಉದ್ಘಾಟಿಸಿದರು.
ಬೆಂಗಳೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೆ.ಬಿ.ಮಾದಯ್ಯ, ಎಪಿಎಂಸಿ ಸದಸ್ಯ ಬೆಪ್ಪುರನ ಮೇದಪ್ಪ ಮಾತನಾಡಿದರು. ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಪಂಡ ರ್ಯಾಲಿ ಮಾದಯ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಸಂಘದ ನಿರ್ದೇಶಕರಾದ ಪೊಡನೋಳಂಡ ಬೊಳ್ಳವ್ವ ಮತ್ತು ಅಯ್ಯಗಡೇರ ಯು. ಜಾನಕಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಘದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಪಟ್ಟಮಾಡ ನಾಣಯ್ಯ, ಪೊಡನೋಳಂಡ ಸುಬ್ಬಯ್ಯ, ತೇಲಪಂಡ ಈ. ಅಪ್ಪಯ್ಯ, ಬಿದ್ದಂಡ ಎಸ್. ಕಾಳಪ್ಪ, ಕೊಡಪಾಲು ಎಸ್. ಗಣಪತಿ, ತೇಲಪಂಡ ಎಂ. ನಂಜಪ್ಪ, ಕೊಡಗನ ಮೊಣಪ್ಪ, ಅಜ್ಜೇಟ್ಟಿರ ಅಯ್ಯಪ್ಪ, ಗುತ್ತಿಗೆದಾರ ಅಹಮ್ಮದ್ ನಿಸಾರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಬಿದ್ದಂಡ ಸಿ. ಸುಬ್ಬಯ್ಯ, ತೋರೆರ ಯು.ಸತೀಶ್, ಬೊಳ್ಳಾರಪಂಡ ಪಿ.ಮಾದಪ್ಪ, ಕಲ್ಲುಮಾಡಂಡ ಅಶೋಕ್ ಕುಟ್ಟಪ್ಪ, ಕೇಟೋಳಿ ಎಂ. ಲೋಕನಾಥ್, ಬಿ.ಎಂ. ಜಗದೀಶ್ ರೈ, ಹೆಚ್.ಎನ್. ಕೃಷ್ಣ, ಕೆ.ಎ. ಉದಯಕುಮಾರ್ ಮತ್ತೀತರರು ಉಪಸ್ಥಿತರಿದ್ದರು. ತಾ.ಪಂ. ಸದಸ್ಯ ಹಾಗೂ ಸಹಕಾರ ಸಂಘದ ನಿರ್ದೇಶಕ ಕೊಡಪಾಲು ಗಪ್ಪು ಗಣಪತಿ ಪ್ರಾರ್ಥಿಸಿ, ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ಟಿ.ಯು. ಕಾವೇರಮ್ಮ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಕೊಪ್ಪಡ ಸಿ. ತಿಮ್ಮಯ್ಯ ವಂದಿಸಿದರು.