ವೀರಾಜಪೇಟೆ, ಫೆ. 25: ಸಂತ ಅನ್ನಮ್ಮ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ತಾ. 26 ರಂದು (ಇಂದು) ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ರೆ. ಫಾ. ಐಸಕ್ ರತ್ನಾಕರ್ ಉದ್ಘಾಟಿಸಲಿದ್ದಾರೆ. ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಎಂ.ಎನ್. ರವಿ ಶಂಕರ್ ಉಪನ್ಯಾಸ ನೀಡಲಿದ್ದಾರೆ.