ಮಡಿಕೇರಿ, ಫೆ. 24: ಬಿಜೆಪಿ ಸೈನಿಕ ಪ್ರಕೋಷ್ಠದಿಂದ ಜಿಲ್ಲಾ ಸಂಯೋಜಕ ಓಡಿಯಂಡ ಎಸ್. ಚಿಂಗಪ್ಪ (ನಿವೃತ್ತ ಮೇಜರ್) ನೇತೃತ್ವದಲ್ಲಿ ಸೈನಿಕ ಕುಟುಂಬಗಳ ಮನೆ ಮನೆಗೆ ತೆರಳಿ ಅಹವಾಲು ಆಲಿಸಿದರು. ಚೇರಂಬಾಣೆ ಸುತ್ತಮುತ್ತಲಿನ ಹತ್ತಾರು ಮನೆಗಳಿಗೆ ಭೇಟಿ ನೀಡಿದ ಪ್ರಕೋಷ್ಠ ಪ್ರಮುಖರು, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.
ಅಲ್ಲದೆ ಸಮಸ್ಯೆಗಳನ್ನು ಸೇನಾ ಮುಖ್ಯಸ್ಥರ ಗಮನಕ್ಕೆ ತಂದು ಪರಿಹರಿಸುವ ಆಶ್ವಾಸನೆ ನೀಡಿದ್ದು, ಆ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಕೋಷ್ಠ ಜಿಲ್ಲಾ ಸಂಚಾಲಕ, ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ತಿಳಿಸಿದ್ದಾರೆ. ಅಲ್ಲದೆ ಸೈನಿಕರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.