ಸೋಮವಾರಪೇಟೆ, ಫೆ. 24: ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಹಾಗು ರಾಷ್ಟ್ರೀಯ ಹೆದ್ದಾರಿ ಕಲ್ಪಿಸುವ ಪರವಾಗಿ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ವಿಷಯ ಪ್ರಸ್ತಾಪಿಸಿದರು.ಜಿಲ್ಲೆಯ ಕೆಲ ಮಂದಿ ಸ್ವ ಪ್ರತಿಷ್ಠೆ ಯಿಂದ ಜಿಲ್ಲೆಗೆ ರೈಲು, ರಾಷ್ಟ್ರೀಯ ಹೆದ್ದಾರಿ ಬೇಡ ಎಂದು ಒತ್ತಾಯಿಸು ತ್ತಿದ್ದಾರೆ. ಆದರೆ ಕೊಡಗು ಅಭಿವೃದ್ಧಿ ಹೊಂದಬೇಕಾದರೆ ಉತ್ತಮ ಸಾರಿಗೆ ಸಂಪರ್ಕದ ಅವಶ್ಯಕತೆಯಿದೆ. ಪ್ರವಾಸಿಗರ ಆಕರ್ಷಣೆಗೆ ಸಾರಿಗೆ ಸೌಲಭ್ಯಗಳು ಉತ್ತಮವಾಗಿರಬೇಕು. ಗುಂಡೂರಾವ್ ಅವರು ಮುಖ್ಯ ಮಂತ್ರಿಯಾಗಿದ್ದಾಗಲೇ ಕೊಡಗಿನ ಜನರು ರೈಲು ಮಾರ್ಗಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಜಿಲ್ಲೆಯ ಜನರ ಕನಸು ನನಸಾಗುವ ಸಂದರ್ಭದಲ್ಲಿ ಕೆಲ ಮಂದಿ ಅಪಸ್ವರ ಎತ್ತುವದು ಸರಿಯಲ್ಲ ಎಂದರು.
ಜಿಲ್ಲೆಗೆ ರೈಲು ಸಂಪರ್ಕ ಹಾಗು ರಾಷ್ಟ್ರೀಯ ಹೆದ್ದಾರಿಗೆ ಸೂಕ್ತ ಅನುದಾನ ಕಲ್ಪಿಸುವಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹತ್ತನೇ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಗಳಿಸಿದ ಜನಾಂಗದ ವಿದ್ಯಾರ್ಥಿ ಗಳಾದ ಹುಲ್ಲೂರಿಕೊಪ್ಪ ಗ್ರಾಮದ ನಿಶಿತಾ ಗೌಡ, ಕುಶಾಲನಗರದ ಎ.ಎಸ್. ನಿರೀಕ್ಷಾ, ಅಪ್ಪಶೆಟ್ಟಳ್ಳಿ ಎ.ಎಂ. ಪ್ರಕೃತಿ, ಐಗೂರಿನ ಡಿ.ಪಿ. ಅಮೂಲ್ಯ, ಕೂತಿ ಗ್ರಾಮದ ಡಿ.ಸಿ. ಚಂದನ್, ನೇಗಳ್ಳಿ ಕರ್ಕಳ್ಳಿಯ ಎನ್.ಎಸ್. ಪ್ರಜ್ಞಾ, ಕಿರಗಂದೂರುವಿನ ಸಿ.ಪಿ. ಚಿನ್ಮಯಿ ಅವರುಗಳನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭ ದಾನಿಗಳಾದ ಕೆ.ಎಂ. ಮನುಕುಮಾರ್, ಗಿರೀಶ್ ಮಲ್ಲಪ್ಪ, ಕೆ.ಎನ್. ಪಾಪಯ್ಯ, ಲಾವಣ್ಯ ಮೋಹನ್, ನಾಗರಾಜ್, ಕೊಮಾರಪ್ಪ, ಚಂದ್ರಪಾಲ್, ಜಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವಿಧಾನ ಪರಿಷತ್
(ಮೊದಲ ಪುಟದಿಂದ) ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮಾಜಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಸಂಘದ ಪದಾಧಿಕಾರಿಗಳಾದ ಸಿ.ಕೆ. ರಾಘವ, ಎನ್.ಬಿ. ಗಣಪತಿ, ಸಿ.ಎಸ್. ಸುರೇಶ್, ಜಿ.ಪಿ. ಲಿಂಗರಾಜು, ಕೆ.ಟಿ. ಪರಮೇಶ್, ಬಿ.ಕೆ. ಚಿಣ್ಣಪ್ಪ, ಎಂ.ಎಲ್. ರಾಜು, ಎಚ್.ಎಂ. ಬಸಪ್ಪ, ಕೆ.ಎಂ. ಜಗದೀಶ್, ಕೆ.ಎಸ್. ರಾಮಚಂದ್ರ, ಎಚ್.ಸಿ. ಮಾದಪ್ಪ, ಎಚ್.ಪಿ. ಮೋಹನ್, ಎಂ.ಎಸ್. ನಂದಕುಮಾರ್, ಬಿ.ಪಿ. ಪೊನ್ನಪ್ಪ, ನಿರ್ಮಲ ಪ್ರಕಾಶ್, ಎಂ.ಎಂ. ಕೃಷ್ಣ, ಕೆ.ಕೆ. ಹೇಮಂತ್, ಬಿ.ಇ. ಶಿವಯ್ಯ, ಡಿ.ಪಿ. ನಿಂಗಪ್ಪ, ಡಿ.ಟಿ. ಪುರಂದರ, ಎಚ್.ಪಿ. ರಾಜಪ್ಪ, ಎಸ್.ಬಿ. ಭರತ್ ಕುಮಾರ್, ಕೆ.ಜೆ. ಜಯಪ್ಪ, ಎ.ಆರ್. ಚಂಗಪ್ಪ, ಭಾರತಿ ಜೋಯಪ್ಪ, ಜಲಾ ಹೂವಯ್ಯ, ಹರಿಣಿ ಕುಶಾಲಪ್ಪ ಉಪಸ್ಥಿತರಿದ್ದರು.
ದಕ್ಷಿಣ ಕೊಡಗಿನಲ್ಲಿ ರೈಲು ಮಾರ್ಗಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸೋಮವಾರಪೇಟೆಯ ಒಕ್ಕಲಿಗರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವದು ಗಮನಾರ್ಹವಾಗಿದ್ದು, ಪ್ರಸ್ತಾವಿತ ಕುಶಾಲನಗರದವರೆಗೋ ಅಥವಾ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗುವ ಮಾರ್ಗಕ್ಕೋ ಎಂಬ ಬಗ್ಗೆ ಸ್ಪಷ್ಟ ಚರ್ಚೆಗಳು ನಡೆದಿಲ್ಲ. ಒಟ್ಟಾರೆ ಕೊಡಗಿಗೆ ರೈಲು ಮಾರ್ಗ ಬೇಕು ಎಂಬ ಪರವಾಗಿ ನಿರ್ಣಯ ಕೈಗೊಳ್ಳಲಾಯಿತು.